ಭಾರತದ ರೂಪಾಯಿ ಏಷ್ಯದಲ್ಲೇ ಕಳಪೆ ಕರೆನ್ಸಿ!

261

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಭಾರತದ ರೂಪಾಯಿ ಮೌಲ್ಯ ಡಾಲರ್ ಎದುರು ಕುಸಿಯುತ್ತಲೇ ಇದೆ. 2022ರಲ್ಲಿ ಶೇಕಡ 11.3ರಷ್ಟು ಇಳಿಕೆ ಕಂಡಿದೆ. ಹೀಗಾಗಿ ಏಷ್ಯದಲ್ಲಿ ಅತಿ ಕಳಪೆ ಸಾಧನೆ ಮಾಡಿದ ಕರೆನ್ಸಿಯಾಗಿದೆ ಎಂದು ತಿಳಿದು ಬಂದಿದೆ.

ರೂಪಾಯಿ ಮೌಲ್ಯ ಕುಸಿಯುತ್ತಿದ್ದರೆ ಡಾಲರ್ ಮೌಲ್ಯ ಹೆಚ್ಚಿಸಿಕೊಳ್ಳುತ್ತಿದೆ. ಫಡರಲ್ ರಿಸರ್ವ್ ಕೂಡ ತನ್ನ ಹಣಕಾಸು ನೀತಿಯನ್ನು ಬದಲು ಮಾಡಿದೆ. ಇತ್ತ ಆರ್ ಬಿಐ ಸಹ ಹಣದುಬ್ಬರ ತಡೆಯಲು 5 ಬಾರಿ ರೆಪೋ ದರ ಹೆಚ್ಚಿಸಿದೆ. ನಿನ್ನೆಯ ವಹಿವಾಟಿಗೆ ಸಂಬಂಧಿಸಿದಂತೆ ರೂಪಾಯಿ 82.74ಕ್ಕೆ ಕುಗ್ಗಿದೆ. 2023ರಲ್ಲಿ 83.50ರ ನಡುವೆ ಇರಲಿದೆ ಎಂದು ಹೇಳಲಾಗುತ್ತಿದೆ.

2015ರಿಂದ ಡಾಲರ್ ಮೌಲ್ಯ ಹೆಚ್ಚುತ್ತಿದೆ. ಇತ್ತ ರೂಪಾಯಿ ಮೌಲ್ಯ ಕಡಿಮೆಯಾಗುತ್ತಿದೆ. ಹೀಗಾಗಿ ಆಮದು, ರಫ್ತಿನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಹೀಗಾಗಿ ಇತರೆ ದೇಶಗಳು ಆಮದು, ರಫ್ತಿನ ಮೇಲೆ ನಿಯಂತ್ರಣ ಹೇರುವ ಕೆಲಸ ಮಾಡುತ್ತಿವೆ.




Leave a Reply

Your email address will not be published. Required fields are marked *

error: Content is protected !!