ಭಾರತಕ್ಕೆ ಶರಣಾದ ಬಾಂಗ್ಲಾ

191

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಬಾಂಗ್ಲಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬರೋಬ್ಬರಿ 227 ರನ್ ಗಳ ಅಂತರದಿಂದ ಗೆಲುವು ಸಾಧಿಸಿದೆ. 8 ವಿಕೆಟ್ ನಷ್ಟಕ್ಕೆ 409 ರನ್ ಗಳನ್ನು ಕಲೆ ಹಾಕುವ ಮೂಲಕ 6ನೇ ಬಾರಿಗೆ ಭಾರತ 400ರ ಗಡಿ ದಾಟಿತು. ಇಶಾನ್ ಕಿಶನ್ 210, ಕೊಹ್ಲಿ 113 ರನ್ ಗಳ ಭರ್ಜರಿ ಆಟದಿಂದಾಗಿ ಇಷ್ಟು ದೊಡ್ಡ ಮೊತ್ತ ಪೇರಿಸಿತು.

ಬೃಹತ್ ರನ್ ಚೇಸ್ ಮಾಡಿದ ಬಾಂಗ್ಲಾ ಪಡೆ ಭಾರತದ ಬೌಲರ್ ಗಳ ಎದುರು ಮುಗ್ಗರಿಸಿದರು. ಶಕೀಬ್ ಅಲ್ ಹಸನ್ 43, ಲಿಟನ್ ದಾಸ್ 29, ಯಾಸಿರ್ 25 ರನ್ ಗರಿಷ್ಠ ಸ್ಕೋರ್ ಆಗಿದೆ. ಹೀಗಾಗಿ 182 ರನ್ ಗಳಿಗೆ ಬಾಂಗ್ಲಾ ಸರ್ವಪತನ ಕಂಡಿತು. ಭಾರತ ಪರ ಶಾರ್ದೂಲ್ ಠಾಕೂರ್ 3, ಅಕ್ಷರ್ ಪಟೇಲ್, ಉರ್ಮನ್ ಮಲಿಕ್ ತಲಾ 2, ಸಿರಾಜ್, ಸುಂದರ್, ಕುಲದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.

3 ಪಂದ್ಯಗಳ ಸರಣಿಯಲ್ಲಿ ಬಾಂಗ್ಲಾ 2-1ರಿಂದ ಸರಣಿ ತನ್ನದಾಗಿಸಿಕೊಂಡಿತು. ಮೇಹಿದಿ ಹಸನ್ ಸರಣಿ ಶ್ರೇಷ್ಠ ಆಟಗಾರ, ಇಶಾನ್ ಕಿಶನ್ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.




Leave a Reply

Your email address will not be published. Required fields are marked *

error: Content is protected !!