ಅಂತರ ರಾಜ್ಯಕ್ಕೆ ಹೋಗಲು ಗ್ರೀನ್ ಸಿಗ್ನಲ್

622

ಬೆಂಗಳೂರು: ಅಂತರ ರಾಜ್ಯಗಳಿಗೆ, ಅಂತರ ಜಿಲ್ಲೆಳಿಗೆ ಹೋಗುವ ಕಾರ್ಮಿಕರಿಗೆ ಅನುಮತಿ ನೀಡಲು, ಇಂದಿನ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜಿ.ಸಿ ಮಾಧುಸ್ವಾಮಿ ತಿಳಿಸಿದ್ದಾರೆ.

ಇಂದು ನಡೆದ ಸಚಿವ ಸಂಪುಟ ಬಳಿಕ ಮಾಧ್ಯಮದವರೊಂದಿಗೆ ಮಾತ್ನಾಡಿದ ಅವರು, ರಾಜ್ಯದಲ್ಲಿ ಆರ್ಥಿಕ ಕ್ರೋಢಿಕರಣಕ್ಕೆ ಸಂಬಂಧಿಸಿದಂತೆ ಇಂದು ಚರ್ಚಿಸಲಾಗಿದೆ. ಕೈಗಾರಿಕೆಗಳನ್ನ ತೆರೆಯುವ ಸಂಬಂಧ ಅನುಮತಿ ನೀಡಲಾಗಿದೆ. ಕೇಂದ್ರದಿಂದ ಸುತ್ತೋಲೆ ಬಂದಿದ್ದು, ರಾಜ್ಯದಿಂದ ಹೊರ ರಾಜ್ಯಗಳಿಗೆ ಹೋಗುವ ಕಾರ್ಮಿಕರಿಗೆ ಅನುಮತಿ ನೀಡಲಾಗ್ತಿದೆ. ಅದಕ್ಕೆ ಬಸ್ ವ್ಯವಸ್ಥೆ ಮಾಡಲಾಗುತ್ತೆ. ವೆಚ್ಚವನ್ನ ಅವರೆ ಭರಿಸಬೇಕು ಎಂದಿದ್ದಾರೆ.

ಇನ್ನು ಅಂತರ ಜಿಲ್ಲೆಗಳಿಗೆ ಕೂಗುವ ಕೂಲಿ ಕಾರ್ಮಿಕರಿಗೂ ಅವಕಾಶ ನೀಡಲಾಗುತ್ತೆ. ಒಮ್ಮೆ ಹೋದ್ರೆ ವಾಪಸ್ ಬರುವ ಆಗಿಲ್ಲ. ರೆಡ್ ಝೋನ್ ಇಲ್ಲದ ಪ್ರದೇಶಗಳಲ್ಲಿನ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರಿಗೆ ಹೋಗಿ ಬರಲು ಅವಕಾಶ ನೀಡಲಾಗುತ್ತೆ ಎಂದು ಸಚಿವರು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!