ಸಾನಿಯಾ-ಶೋಯಬ್ ವಿಚ್ಛೇದನ ಸ್ಪಷ್ಟಪಡಿಸಿದ ಕುಟುಂಬ

222

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಭಾರತದ ಮಾಜಿ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಪಾಕ್ ಮಾಜಿ ಕ್ರಿಕೆಟ್ ಆಟಗಾರ ಶೋಯಬ್ ಮಲಿಕ್ ಅವರ ದಾಂಪತ್ಯ ಜೀವನದಲ್ಲಿನ ಒಡಕಿನ ಬಗ್ಗೆ ಕಳೆದೊಂದು ವರ್ಷದಿಂದ ಸುದ್ದಿ ಹರಿದಾಡುತ್ತಿತ್ತು. ಶನಿವಾರ ಪಾಕ್ ನಟಿ ಸನಾಳನ್ನು ಶೋಯಬ್ ಮದುವೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಎಲ್ಲದಕ್ಕೂ ತೆರೆ ಬಿದ್ದಿದೆ.

ಶೋಯಬ್ ಮತ್ತೊಂದು ಮದುವೆ ಬಳಿಕ, ಸಾನಿಯಾ ಕುಟುಂಬ ತಮ್ಮ ಮಗಳ ಸಂಸಾರಿಕ ಜೀವನದ ಬಗ್ಗೆ ಸ್ಪಷ್ಟನೆ ನೀಡಿದೆ. ಸಾನಿಯಾ, ಶೋಯಬ್ ಕೆಲ ತಿಂಗಳ ಹಿಂದೆಯೇ ವಿಚ್ಛೇದನ ಪಡೆದಿದ್ದಾರೆ. ಸಾನಿಯಾ ತನ್ನ ವೈಯಕ್ತಿಕ ಜೀವನವನ್ನು ಸಾರ್ವಜನಿಕ ಬದುಕಿನಿಂದ ಯಾವಾಗಲೂ ದೂರವಿಟ್ಟಿದ್ದಾರೆ. ಈ ಸೂಕ್ಷ್ಮ ಸಂದರ್ಭದಲ್ಲಿ ಯಾರೂ ವದಂತಿಗಳಿಗೆ ಕಿವಿಗೊಡಬಾರದು ಎಂದು ಕುಟುಂಬಸ್ಥರು ಸ್ಪಷ್ಟಪಡಿಸಿದ್ದಾರೆ.

ಸಾನಿಯಾ ಹಾಗೂ ಶೋಯಬ್ 2010ರಲ್ಲಿ ಹೈದ್ರಾಬಾದ್ ನಲ್ಲಿ ಮದುವೆಯಾಗಿದ್ದರು. ಪಾಕ್ ನಲ್ಲಿ ವಲಿಮಾ ಮಾಡಿಕೊಂಡಿದ್ದರು. 2018ರಲ್ಲಿ ಇವರಿಗೆ ಗಂಡು ಮಗು ಜನಿಸಿದೆ. ಕೆಲವು ಕಾರಣಗಳಿಂದ ಇವರಿಬ್ಬರ ಜೀವನದಲ್ಲಿ ವೈಮನಸ್ಸು ಮೂಡಿ, ಕೊನೆಗೆ ಡಿವೋರ್ಸ್ ಆಗಿದೆ. ಟೆನ್ನಿಸ್ ನ ಡಬಲ್ಸ್ ಹಾಗು ಮಿಶ್ರ ಡಬಲ್ಸ್ ನಲ್ಲಿ 6 ಬಾರಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಪಡೆದಿರುವ ಸಾನಿಯಾ ಮಿರ್ಜಾ ಕಳೆದ ವರ್ಷ ನಿವೃತ್ತಿ ಪಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!