ಆರ್ ಸಿಬಿ ತಂಡಕ್ಕೆ ಬಂದಳು ಮೂಗುತಿ ಸುಂದರಿ

196

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಭಾರತೀಯ ಟೆನ್ನಿಸ್ ಅಂಗಳದಲ್ಲಿ ಹೊಸ ಅಲೆ ಎಬ್ಬಿಸಿದವಳು ಮೂಗುತಿ ಸುಂದರಿ ಸಾನಿಯಾ ಮಿರ್ಜಾ. ವಿಶ್ವ ಟೆನ್ನಿಸ್ ಲೋಕದಲ್ಲಿ ಮಹಿಳಾ ಆಟಗಾರ್ತಿಯರಲ್ಲಿ ಚೆಂದುಳ್ಳಿ ಚೆಲುವೆಯರು ಎಂದು ಗುರುತಿಸಿಕೊಂಡವರಲ್ಲಿ ಸಾನಿಯಾ ಸಹ ಒಬ್ಬರು. ಆದರೆ, ಟೆನ್ನಿಸ್ ಕೋರ್ಟ್ ಬಿಟ್ಟು ಈಗ ಕ್ರಿಕೆಟ್ ಮೈದಾನಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಯೆಸ್, ವುಮೆನ್ ಪ್ರಿಮಿಯರ್ ಲೀಗ್ ನ ಭಾಗವಾಗಿ ಆರ್ ಸಿಬಿ ತಂಡದ ಮೆಂಟರ್ ಆಗಿ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರನ್ನು ನೇಮಿಸಲಾಗಿದೆ. ಇದು ಅಚ್ಚರಿ ಎನಿಸಬಹುದು. ಟೆನ್ನಿಸ್ ಆಟಗಾರ್ತಿ ಆಗಿದ್ದರೂ ಕ್ರಿಕೆಟ್ ಮೇಲೆ ಸಾಕಷ್ಟು ಪ್ರೀತಿ ಇದೆ. ಹಲವು ಬಾರಿ ಮೈದಾನಕ್ಕೆ ಬಂದು ಪಂದ್ಯ ನೋಡಿದ್ದಾರೆ. ಜೊತೆಗೆ ಇವರ ಪತಿ ಶೋಯಬ್ ಮಲಿಕ್ ಪಾಕ್ ಕ್ರಿಕೆಟ್ ಆಟಗಾರರಾಗಿದ್ದಾರೆ.

ಮಹಿಳಾ ಕ್ರಿಕೆಟ್ ಆಟಗಾರ್ತಿಯರಲ್ಲಿ ಸ್ಪೂರ್ತಿ ತುಂಬುವ ಕೆಲಸವನ್ನು ಸಾನಿಯಾ ಮಾಡಲಿದ್ದಾರೆ. ಜೊತೆಗೆ ದೈಹಿಕ ಸಾಮರ್ಥ್ಯದ ಕುರಿತು ಟಿಪ್ಸ್ ನೀಡಲಿದ್ದಾರೆ. ಸಾನಿಯಾ ಮಿರ್ಜಾ ಆಗಮನದಿಂದ ಆರ್ ಸಿಬಿ ಅಭಿಮಾನಿಗಳಿಗೆ ಮತ್ತಷ್ಟು ಜೋಶ್ ಬರಲಿದೆ.




Leave a Reply

Your email address will not be published. Required fields are marked *

error: Content is protected !!