ಬೊಮ್ಮಾಯಿ ಕೊನೆಯ ಬಜೆಟ್.. ಹೆಚ್ಚಿದ ನಿರೀಕ್ಷೆ

127

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬಜೆಟ್ ಅಧಿವೇಶನ ನಡೆಯುತ್ತಿದ್ದು, ಹಲವು ವಿಚಾರಗಳ ಚರ್ಚೆ ಜೋರಾಗಿದೆ. ಆದರೆ, ಸಧ್ಯ ಎಲ್ಲರ ಕಣ್ಣು ಇರುವುದು ಬಜೆಟ್ ಮೇಲೆ. ಫೆಬ್ರವರಿ 17ರಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಂಡಿಸುವ ಬಜೆಟ್ ಈ ಸರ್ಕಾರದ ಕೊನೆಯ ಬಜೆಟ್ ಆಗಿದೆ. ಹೀಗಾಗಿ ಎಲ್ಲರಲ್ಲೂ ಕುತೂಹಲ ಮೂಡಿದೆ.

ಕೃಷಿ, ಕಾರ್ಮಿಕ ವಲಯ, ಶಿಕ್ಷಣ, ಆರೋಗ್ಯ, ಮಹಿಳೆಯರು, ವೃದ್ಧರು, ತಂತ್ರಜ್ಞಾನ, ವಿಜ್ಞಾನ ಕ್ಷೇತ್ರ, ವಾಣಿಜ್ಯ ವಲಯ, ಹೋಟೆಲ್ ಉದ್ಯಮ, ಕೈಗಾರಿಕೋದ್ಯಮ ಸೇರಿದಂತೆ ಯಾವೆಲ್ಲ ಕ್ಷೇತ್ರಕ್ಕೆ ಏನೆಲ್ಲ ಸೌಲಭ್ಯಗಳನ್ನು ನೀಡುತ್ತಾರೆ? ಜೊತೆಗೆ ಯಾವೆಲ್ಲ ಹೊಸ ಯೋಜನೆಗಳನ್ನು ಘೋಷಣೆ ಮಾಡುತ್ತಾರೆ? ಮಂಡಿಸಿದ ಎಲ್ಲ ಯೋಜನೆಗಳನ್ನು ಉಳಿಯುವ ಅಲ್ಪ ಅವಧಿಯಲ್ಲಿಯೇ ಕಾರ್ಯರೂಪಕ್ಕೆ ತರಲು ಸಾಧ್ಯವೇ ಅನ್ನೋ ಪ್ರಶ್ನೆಯಿದೆ.

ಇನ್ನು ವಿಪಕ್ಷಗಳು ಸಹ ಈ ಸರ್ಕಾರದ ಕೊನೆಯ ಬಜೆಟ್ ಏನಾಗಿರಲಿದೆ. ಅದನ್ನು ಇಟ್ಟುಕೊಂಡು ಹೇಗೆ ಕಟ್ಟಿ ಹಾಕಬೇಕು, ಜನರ ಮುಂದೆ ಸರ್ಕಾರದ ನಡೆಯನ್ನು ಯಾವ ರೀತಿ ಖಂಡಿಸಬೇಕು. ಮುಂದೆ ಬರುವ ಚುನಾವಣೆಯಲ್ಲಿ ಮತಗಳಿಕೆಗೆ ಏನೆಲ್ಲ ಪ್ಲಾನ್ ಮಾಡಬೇಕು ಅನ್ನೋ ಲೆಕ್ಕಾಚಾರ ನಡೆಸಿದೆ. ಒಟ್ಟಿನಲ್ಲಿ ಫೆಬ್ರವರಿ 17ರಂದು ಮಂಡಿಸಲಿರುವ ಬಜೆಟ್ ಸಾಕಷ್ಟು ನಿರೀಕ್ಷೆ ಮೂಡಿಸಿದೆ.




Leave a Reply

Your email address will not be published. Required fields are marked *

error: Content is protected !!