ಸಾನಿಯಾ ಕೈ ಬಿಟ್ಟು, ಸನಾ ಕೈ ಹಿಡಿದ ಶೋಯಬ್!

219

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಇಂಡಿಯಾದ ಮಾಜಿ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಪಾಕ್ ಮಾಜಿ ಕ್ರಿಕೆಟಿಗ ಶೋಯಬ್ ಮಲಿಕ್ ನಡುವಿನ ದಾಂಪತ್ಯ ಮುರಿದುಬಿದ್ದಿದೆ ಎಂದು ಹೇಳಲಾಗುತ್ತಿತ್ತು. ಅದಕ್ಕೆ ಸಾಕ್ಷಿ ಎಂಬಂತೆ ಇದೀಗ ಶೋಯಬ್ ಮಲಿಕ್ ನಟಿ ಸನಾ ಜಾವೇದರನ್ನ ಮದುವೆಯಾಗಿದ್ದಾರೆ.

41 ವರ್ಷದ ಶೋಯಬ್ ಮಲಿಕ್ ಸನಾ ಜೊತೆಗಿನ ಮದುವೆ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಇದರೊಂದಿಗೆ ಸಾನಿಯಾ ಜೊತೆಗಿನ 13 ವರ್ಷಗಳ ದಾಂಪತ್ಯ ಜೀವನ ಅಂತ್ಯವಾಗಿದೆ.

ಬುಧವಾರವಷ್ಟೇ ಸಾನಿಯಾ ಮಿರ್ಜಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೊಂದನ್ನು ಮಾಡಿದ್ದರು. ಮದುವೆ ಕಷ್ಟ, ವಿಚ್ಛೇದನ ಕಷ್ಟ. ನಿನ್ನ ಕಷ್ಟ ಆಯ್ಕೆ ಮಾಡಿಕೊ. ಬೊಜ್ಜು ಕಷ್ಟ. ಸದೃಢವಾಗಿರುವುದು ಕಷ್ಟ. ನಿನ್ನ ಕಷ್ಟವನ್ನು ಆರಿಸಿಕೊ. ಸಾಲದಲ್ಲಿರುವುದು ಕಷ್ಟ. ಆರ್ಥಿಕವಾಗಿ ಶಿಸ್ತಾಗಿರುವುದು ಕಷ್ಟ. ನಿನ್ನ ಕಷ್ಟವನ್ನು ಆಯ್ಕೆ ಮಾಡಿಕೊ. ಸಂವಹನ ಕಷ್ಟ. ಸಂವಹನ ಮಾಡದಿರುವುದು ಕಷ್ಟ. ನಿನ್ನ ಕಷ್ಟವನ್ನು ಆಯ್ಕೆ ಮಾಡಿಕೊ. ಜೀವನ ಎಂದಿಗೂ ಸುಲಭವಾಗಿರುವುದಿಲ್ಲ. ಇದು ಯಾವಾಗಲೂ ಕಷ್ಟವಾಗಿರುತ್ತದೆ. ನಾವು ಬುದ್ಧಿವಂತಿಕೆಯಿಂದ ಕಷ್ಟವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಬರೆದಿದ್ದರು.

2010ರಲ್ಲಿ ಹೈದ್ರಾಬಾದ್ ನಲ್ಲಿ ಸಾನಿಯಾ ಮಿರ್ಜಾ-ಶೋಯಬ್ ಮಲಿಕ್ ಮದುವೆಯಾಗಿದ್ದು, 2018ರಲ್ಲಿ ಅವರಿಗೊಬ್ಬ ಮಗ ಜನಿಸಿದ್ದಾನೆ. ಕಳೆದೊಂದು ವರ್ಷದಿಂದ ಇವರಿಬ್ಬರ ದಾಂಪತ್ಯ ಅಂತ್ಯವಾಗಿದೆ ಎನ್ನು ಸುದ್ದಿ ಹಬ್ಬಿತ್ತು. ಅದು ಇದೀಗ ನಿಜವಾಗಿದೆ.




Leave a Reply

Your email address will not be published. Required fields are marked *

error: Content is protected !!