ಸ್ಟಾರ್ ಕ್ರೀಡಾ ಜೋಡಿ ನಡುವೆ ಬಿರುಕು!

156

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಭಾರತದ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಮೂಗುತಿ ಸುಂದರಿ ಎಂದೆ ಖ್ಯಾತಿಗಳಿಸಿದವರು. ಜೊತೆಗೆ ಟೆನ್ನಿಸ್ ಆಟದ ಕ್ರೇಜ್ ಹೆಚ್ಚಿಸಿದವರು. ಈಕೆ ಪಾಕಿಸ್ತಾನದ ಸ್ಟಾರ್ ಕ್ರಿಕೆಟ್ ಆಟಗಾರ ಶೋಹೆಬ್ ಮಲಿಕ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಈ ಜೋಡಿಯ ನಡುವೆ ಬಿರುಕು ಮೂಡಿದೆ ಎನ್ನಲಾಗುತ್ತಿದೆ.

ಸಾನಿಯಾ ಇತ್ತೀಚೆಗೆ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ವಿಚಾರಗಳು ಇದಕ್ಕೆ ದಾರಿ ಮಾಡಿಕೊಟ್ಟಿದೆ. ಅಲ್ಲದೇ ಶೋಹೆಬ್ ಮಲಿಕ್ ನೀಡಿದ ಸಂದರ್ಶನದಲ್ಲಿ ಆಡಿದ ಕೆಲ ಮಾತುಗಳು ಸಹ ಇವರಿಬ್ಬರ ನಡುವೆ ಎಲ್ಲವೂ ಸರಿಯಾಗಿಲ್ಲ ಅನ್ನೋದಕ್ಕೆ ಪುಷ್ಠಿ ನೀಡುತ್ತಿದೆ.

ಒಡೆದ ಹೃದಯಗಳು ಎಲ್ಲಿಗೆ ಹೋಗುತ್ತವೆ? ಅಲ್ಲಾನನ್ನು ಹುಡುಕಲು ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ಅವರ ಅಭಿಮಾನಿಗಳು ಸೇರಿದಂತೆ ಅನೇಕರು ಸ್ಟಾರ್ ಕ್ರೀಡಾ ಜೋಡಿಯ ಸಂಬಂಧ ಸರಿಯಿಲ್ಲ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಸ್ವತಃ ಸಾನಿಯಾ ಹಾಗೂ ಶೋಹೆಬ್ ಮಾತನಾಡಬೇಕಿದೆ. ಹಲವು ವಿರೋಧಗಳ ನಡುವೆ ಏಪ್ರಿಲ್ 12, 2010ರಲ್ಲಿ ಹೈದ್ರಾಬಾದ್ ನಲ್ಲಿ ಇಲ್ಲಿಯ ಮುಸ್ಲಿಂ ಸಂಪ್ರದಾಯದಂತೆ ಮದುವೆ ಮಾಡಿಕೊಂಡರು. ನಂತರ ಪಾಕಿಸ್ತಾನದ ಸಿಯಾಲ್ ಕೋಟ್ ನಲ್ಲಿ ಪಾಕ್ ಪದ್ಧತಿಯಂತೆ ಮದುವೆ ನಡೆಯಿತು. ಈ ದಂಪತಿಗೆ 4 ವರ್ಷದ ಇಜಾನ್ ಅನ್ನೋ ಮಗನಿದ್ದಾನೆ.




Leave a Reply

Your email address will not be published. Required fields are marked *

error: Content is protected !!