ನ.11ಕ್ಕೆ ಪ್ರಧಾನಿ ಬೆಂಗಳೂರಿಗೆ: ಬಿಬಿಎಂಪಿಯಿಂದ ಮತ್ತೆ ತರಾತುರಿ ಕೆಲಸ

152

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ, ಥೀಮ್ ಪಾರ್ಕ್ ಗೆ ಶಂಕು ಸ್ಥಾಪನೆ, ವಂದೇ ಭಾರತ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆ ಸಂಬಂಧ ಪ್ರಧಾನಿ ಮೋದಿ ನವೆಂಬರ್ 11ರಂದು ಸಿಲಿಕಾನ್ ಸಿಟಿಗೆ ಆಗಮಿಸುತ್ತಿದ್ದಾರೆ.

ಹೀಗಾಗಿ ಬಿಬಿಎಂಪಿ ಮತ್ತೆ ತರಾತುರಿಯಲ್ಲಿ ಕೆಲಸಗಳನ್ನು ನಡೆಸಿದೆ. ಬರೋಬ್ಬರಿ 8.7 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಜೆಸ್ಟಿಕ್ ನಲ್ಲಿ ವೈಟ್ ಟ್ಯಾಪಿಂಗ್ ನಡೆಸಿದೆ. ಗುಬ್ಬಿ ತೋಟದಪ್ಪ ರಸ್ತೆ, ನಿಲ್ದಾಣದ ಎದುರಿನ ರಸ್ತೆ ಸೇರಿದಂತೆ ಗುಂಡಿಗಳ ಮುಚ್ಚುವ ಕೆಲಸವನ್ನು ನಡೆಸಿದೆ.

ಇತ್ತೀಚೆಗೆ ಪ್ರಧಾನಿ ಮೋದಿ ಬಂದಾಗಲೂ ಇದೆ ರೀತಿ ಮಾಡಿದರು. ಆದರೆ, ಕಾಮಗಾರಿ ಕಳಪೆಯಾಗಿದ್ದರಿಂದ ಸಾರ್ವಜನಿಕರ ಹಣವನ್ನು ನೀರಲ್ಲಿ ಹೋಮ ಮಾಡಿದರು. ಈಗ ಮತ್ತೆ ರಿಪೇರಿ ಕೆಲಸ ನಡೆಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.




Leave a Reply

Your email address will not be published. Required fields are marked *

error: Content is protected !!