ಐಪಿಎಲ್ ಪಟ್ಟಕ್ಕಾಗಿ ಜಿಟಿ-ಆರ್ ಆರ್ ಫೈಟ್

370

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ 8 ಗಂಟೆಗೆ ಐಪಿಎಲ್ 2022ನೇ ಸಾಲಿನ ಫೈನಲ್ ಪಂದ್ಯ ನಡೆಯಲಿದೆ. ಮೊದಲ ಬಾರಿಗೆ ಐಪಿಎಲ್ ಟೂರ್ನಿಯಲ್ಲಿ ಕಾಣಿಸಿಕೊಂಡಿರುವ ಗುಜರಾತ್ ಟೈಟಾನ್ಸ್ ಫೈನಲ್ ಗೆ ಬಂದಿದ್ದಾರೆ. 2008ರಲ್ಲಿ ಶುರುವಾದ ಐಪಿಎಲ್ ನ ಮೊದಲ ಚಾಂಪಿಯನ್ಸ್ ರಾಜಸ್ಥಾನ್ ರಾಯಲ್ಸ್ ಮತ್ತೆ ಕಪ್ ಗೆಲ್ಲಲು ಸಿದ್ಧವಾಗಿದೆ.

ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ನಾಕೌಟ್ ಹಂತದಲ್ಲಿ 14ರಲ್ಲಿ 10 ಪಂದ್ಯ ಗೆದ್ದು ಟಾಪ್ 1ಗೆ ಬಂದಿತು. ನಂತರ ಮೊದಲ ಪೇ ಆಫ್ ನಲ್ಲಿ ರಾಜಸ್ತಾನ್ ವಿರುದ್ಧ ಗೆದ್ದು ಫೈನಲ್ ಗೆ ಲಗ್ಗೆ ಇಟ್ಟಿತು. 2ನೇ ಸ್ಥಾನದಲ್ಲಿದ್ದ ರಾಜಸ್ಥಾನೆಗೆ ಮತ್ತೊಂದು ಚಾನ್ಸ್ ಸಿಕ್ಕಿತು. ಹೀಗಾಗಿ ಲಖ್ನೋ ವಿರುದ್ಧ ಗೆದ್ದ ಆರ್ ಸಿಬಿ ಜೊತೆಗೆ ಆಡಿ ಗೆಲುವು ಸಾಧಿಸಿ ಫೈನಲ್ ಗೆ ಬಂದಿದೆ.

ಸಂಜು ಸ್ಯಾಮ್ಸನ್ ಲೀಡ್ ಮಾಡುತ್ತಿರುವ ಗುಜರಾತ್ ತಂಡ, ಮೊದಲ ಟೂರ್ನಿಯಲ್ಲಿಯೇ ಚಾಂಪಿಯನ್ಸ್ ಪಟ್ಟ ದೊರಕಿಸಿಕೊಟ್ಟ ದಿವಂಗತ ಶೇನ್ ವಾರ್ನ್ ಅವರ ಸಲುವಾಗಿ ಈ ಬಾರಿ ಕಪ್ ಗೆಲ್ಲುತ್ತೇವೆ ಎಂದಿದ್ದಾರೆ. ಹೃದಯಾಘಾತದಿಂದ ಶೇನ್ ವಾರ್ನ್ ಇತ್ತೀಚೆಗೆ ನಿಧನರಾದರು.

ಭಾನುವಾರ ಸಂಜೆ 6.30ಕ್ಕೆ ಫೈನಲ್ ಪಂದ್ಯಕ್ಕೂ ಮೊದಲು ಮನರಂಜನೆಯ ಕಾರ್ಯಕ್ರಮ ನಡೆಯುತ್ತೆ. ಸಂಗೀತ ದಿಗ್ಗಜ ಎ.ಆರ್ ರೆಹಮಾನ್ ಹಾಗೂ ನಟ ರಣವೀರ್ ಸಿಂಗ್ ಸೇರಿ ಇತರರು ರಂಜಿಸಲಿದ್ದಾರೆ. ಈ ಪಂದ್ಯ 7.30ರ ಬದಲಿಗೆ 8 ಗಂಟೆಗೆ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!