ಫಸ್ಟ್ ಟೂರ್ನಿಯಲ್ಲೇ ಗುಜರಾತ್ ಚಾಂಪಿಯನ್ಸ್

449

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಅಹಮದಾಬಾದ್: ಭಾನುವಾರ ರಾತ್ರಿ ನಡೆದ ಐಪಿಎಲ್-2022 ಫೈನಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ ಭರ್ಜರಿ ಗೆಲುವು ಸಾಧಿಸಿ ಚಾಂಪಿಯನ್ಸ್ ಆಗಿದೆ. ಐಪಿಎಲ್ ಗೆ ಎಂಟ್ರಿಯಾದ ಮೊದಲ ಟೂರ್ನಿಯಲ್ಲಿಯೇ ಹಾರ್ದಿಕ್ ಪಾಂಡೆ ಟೀಂ ಕಪ್ ಜಯಸಿದೆ.

ಟಾಸ್ ಗೆದ್ದ ಆರ್ ಆರ್ ತಂಡದ ನಾಯಕ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅವರ ಲೆಕ್ಕಾಚಾರವನ್ನು ಗುಜರಾತ್ ಟೀಂ ಉಲ್ಟಾ ಮಾಡಿತು. ಕ್ಯಾಪ್ಟನ್ ಹಾರ್ದಿಕ್ ಪಾಂಡೆ 3, ಸಾಯಿ ಕಿಶೋರೆ 2 ವಿಕೆಟ್ ಕಿತ್ತು ಪರಾಕ್ರಮ ಮೆರೆದರು. ಶಮಿ, ದಯಾಳ್, ರಶೀದ್ ಖಾನ್ ತಲಾ 1 ವಿಕೆಟ್ ಪೆಡೆದರು. ಇದರ ಪರಿಣಾಮ ರಾಜಸ್ಥಾನ್ ಟೀಂ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 130 ರನ್ ಗಳಿಸಿತು.

ಆರ್ ಸಿಬಿ ವಿರುದ್ಧ ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದ್ದ ಬಟ್ಲರ್ 39 ರನ್ ಹೊರತು ಪಡಿಸಿದರೆ ಯಾರು ಹೆಚ್ಚು ಕ್ರಿಸ್ ನಲ್ಲಿ ನಿಲ್ಲಲಿಲ್ಲ. ಇದರ ಪರಿಣಾಮ ಫೈನಲ್ ಪಂದ್ಯದಲ್ಲಿ ಕೇವಲ 130 ರನ್ ಗಳಿಸಲು ಸಾಧ್ಯವಾಯಿತು. ಸುಲಭದ ಗುರಿ ಬೆನ್ನು ಹತ್ತಿದ ಗುಜರಾತ್ ಟೀಂ, ಶುಭನಂ ಗಿಲ್ ಅಜೇಯ 45, ಡೇವಿಡ್ ಮಿಲ್ಲರ್ ಅಜೇಯ 32 ಹಾಗೂ ನಾಯಕ ಪಾಂಡೆ 34 ರನ್ ಗಳ ನೆರವಿನಿಂದ 18.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿ ಚಾಂಪಿಯನ್ಸ್ ಆದರು.

ಆರಂಭದಲ್ಲಿ ಭರ್ಜರಿ ಆಟವಾಡುತ್ತಲೇ ಬಂದಿದ್ದ ಗುಜರಾತ್ ಟೈಟನ್ಸ್ ಟಾಪ್ 1ರಲ್ಲಿ ಇದ್ದರು. ಮೊದಲ ಪ್ಲೇ ಆಫ್ ನಲ್ಲಿ ಗೆದ್ದು ಫೈನಲ್ ಗೆ ಹೋಗಿದ್ದರು. ಫೈನಲ್ ನಲ್ಲಿ ಮತ್ತೆ ಎದುರಾದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿದರು. ಇದರೊಂದಿಗೆ ಹಾರ್ದಿಕ್ ಪಾಂಡೆ ಯಶಸ್ವಿ ನಾಯಕ ಎನಿಸಿಕೊಂಡರು. 2ನೇ ಬಾರಿಗೆ ಚಾಂಪಿಯನ್ಸ್ ಎನಿಸಿಕೊಳ್ಳಬೇಕು ಎಂದುಕೊಂಡಿದ್ದ ರಾಜಸ್ಥಾನ ಆಸೆಗೆ ಹಾಗೇ ಉಳಿಯಿತು.




Leave a Reply

Your email address will not be published. Required fields are marked *

error: Content is protected !!