ಐಪಿಎಲ್ 2022: ಆರ್ ಸಿಬಿ ಹೊಸ ತಂಡ ಹೀಗಿದೆ..

697

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಪಿಎಲ್ 2022 ಟೂರ್ನಿಯ ಹರಾಜು ಪ್ರಕ್ರಿಯೆ ಮುಗಿದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ಆಟಗಾರರ ಆಯ್ಕೆಯಾಗಿದೆ. ಇವರು ತಂಡದಲ್ಲಿ ಇರುತ್ತಾರೆ ಅನ್ನೋರೆಲ್ಲ ಬೇರೆ ತಂಡ ಸೇರಿದ್ದಾರೆ. ಮಾಜಿ ನಾಯಕ ವಿರಾಟ್ ಕೊಹ್ಲಿ(15 ಕೋಟಿ), ಗ್ಲೇನ್ ಮ್ಯಾಕ್ಸ್ ವೆಲ್(11 ಕೋಟಿ), ಸ್ಪೀಡ್ ಬೌಲರ್ ಮೊಹಮ್ಮದ್ ಸಿರಾಜ್(7) ಕೋಟಿ ಕೊಟ್ಟು ತನ್ನಲ್ಲಿ ಉಳಿಸಿಕೊಂಡು ಉಳಿದ ಆಟಗಾರರನ್ನು ಹರಾಜಿಗೆ ಬಿಟ್ಟಿತ್ತು.

ಹೊಸದಾಗಿ 18 ಆಟಗಾರರನ್ನು ಆಯ್ಕೆ ಮಾಡಿಕೊಂಡಿದೆ. ಇದರೊಂದಿಗೆ ಒಟ್ಟು 21 ಆಟಗಾರರು ಆರ್ ಸಿಬಿ ತಂಡದಲ್ಲಿದ್ದಾರೆ. ಅವರ ಪಟ್ಟಿ ಹೀಗಿದೆ..

ವನಿಂದು ಹಸರಂಗ (ಶ್ರೀಲಂಕಾ)ಸ್ಪಿನ್ನರ್ -10.75 ಕೋಟಿ, ಹರ್ಷಲ್ ಪಟೇಲ್,ವೇಗದ ಬೌಲರ್ 10.75 ಕೋಟಿ, ಜೋಶ್ ಹ್ಯಾಜಲ್‌ವುಡ್ (ಆಸ್ಟ್ರೇಲಿಯಾ) ವೇಗದ ಬೌಲರ್ 7.75 ಕೋಟಿ, ಫಾಫ್ ಡು ಪ್ಲೆಸಿ (ದಕ್ಷಿಣ ಆಫ್ರಿಕಾ) ಬ್ಯಾಟರ್ 7 ಕೋಟಿ, ದಿನೇಶ್ ಕಾರ್ತಿಕ್, ವಿಕೆಟ್ ಕೀಪರ್-ಬ್ಯಾಟರ್ 5.50 ಕೋಟಿ, ಅನೂಜ್ ರಾವತ್, ವಿಕೆಟ್ ಕೀಪರ್-ಬ್ಯಾಟರ್ 3.40 ಕೋಟಿ, ಶಹಬಾಜ್ ಅಹಮದ್, ಆಲ್‌ರೌಂಡರ್ 2.40 ಕೋಟಿ, ಡೇವಿಡ್ ವಿಲ್ಲೇ (ಇಂಗ್ಲೆಂಡ್), ವೇಗದ ಬೌಲರ್‌ 2 ಕೋಟಿ, ಶೆರ್ಫಾನ್ ರುದರ್ಫೋರ್ಡ್‌ (ವೆಸ್ಟ್‌ ಇಂಡೀಸ್), ಆಲ್‌ರೌಂಡರ್ 1 ಕೋಟಿ, ಮಹಿಪಾಲ್ ಲಾಮ್‌ರೋರ್, ಆಲ್‌ರೌಂಡರ್ 95 ಲಕ್ಷ, ಫಿನ್ ಅಲೆನ್ (ನ್ಯೂಜಿಲೆಂಡ್), ವಿಕೆಟ್ ಕೀಪರ್-ಬ್ಯಾಟರ್ 80 ಲಕ್ಷ, ಜೇಸನ್ ಬೆಹ್ರೆನ್ಡೋರ್ಫ್‌ (ಆಸ್ಟ್ರೇಲಿಯಾ) ವೇಗದ ಬೌಲರ್‌ 75 ಲಕ್ಷ, ಸಿದ್ಧಾರ್ಥ್ ಕೌಲ್, ಬೌಲರ್ 75 ಲಕ್ಷ, ಕರಣ್ ಶರ್ಮಾ, ಸ್ಪಿನ್ನರ್ 50 ಲಕ್ಷ, ಸುಯಶ್ ಪ್ರಭುದೇಸಾಯಿ, ವೇಗದ ಬೌಲರ್‌ 30 ಲಕ್ಷ, ಚಾಮಾ ಮಿಲಿಂದ್, ವೇಗದ ಬೌಲರ್ 25 ಲಕ್ಷ,  ಆಕಾಶ್ ದೀಪ್, ವೇಗದ ಬೌಲರ್ 20 ಲಕ್ಷ, ಅನೀಶ್ವರ್ ಗೌತಮ್, ಸ್ಪಿನ್ನರ್ 20 ಲಕ್ಷ, ಲವನೀತ್ ಸಿಸೋಡಿಯಾ, ವಿಕೆಟ್ ಕೀಪರ್-ಬ್ಯಾಟರ್ 20 ಲಕ್ಷ ರೂಪಾಯಿಗೆ ಆರ್ ಸಿಬಿ ತಂಡ ಸೇರಿದ್ದಾರೆ.

ಇನ್ನು ವಿರಾಟ್ ಕೊಹ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡಿರುವುದರಿಂದ ಹೊಸ ಸಾರಥಿ ಯಾರು ಅನ್ನೋ ಪ್ರಶ್ನೆ ಇದೆ. ಮ್ಯಾಕ್ಸ್ ವೆಲ್ ಹಾಗೂ ದಿನೇಶ್ ಕಾರ್ತಿಕ್ ನಡುವೆ ಫೈಟ್ ಇದ್ದು, ಇಬ್ಬರಲ್ಲಿ ಯಾರು ಆರ್ ಸಿಬಿ ಕ್ಯಾಪ್ಟನ್ ಅನ್ನೋದು ಶೀಘ್ರದಲ್ಲಿ ತಿಳಿಯಲಿದೆ. ಒಂದು ವೇಳೆ ಕೊಹ್ಲಿ ವಾಪಸ್ ನಾಯಕನ ಸ್ಥಾನಕ್ಕೆ ಬರುತ್ತಾರ ಹೇಳಲು ಆಗದು.




Leave a Reply

Your email address will not be published. Required fields are marked *

error: Content is protected !!