ಹಿರಿಯ ನಟಿ ಭಾರ್ಗವಿ ನಾರಾಯಣ್ ನಿಧನ

516

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕನ್ನಡ ಚಿತ್ರರಂಗದ ಹಿರಿಯ ನಟಿ, ರಂಗಭೂಮಿ ಕಲಾವಿದೆ ಭಾರ್ಗವಿ ನಾರಾಯಣ್ ನಿಧನರಾಗಿದ್ದಾರೆ. 84 ವರ್ಷದ ಹಿರಿಯ ನಟಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಸ್ವಗೃಹದಲ್ಲಿ ಸಂಜೆ ನಿಧನರಾಗಿದ್ದಾರೆ.

ಇವರ ಪುತ್ರ ಪ್ರಕಾಶ್ ಬೆಳವಾಡಿ, ಮಗಳು ಸುಧಾ ಬೆಳವಾಡಿ, ಮೊಮ್ಮಗಳು ಸಂಯುಕ್ತಾ ಬೆಳವಾಡಿ ಸಹ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಟಿ ಭಾರ್ಗವಿ ಅವರು ಎರಡು ಕನಸು, ಪಲ್ಲವಿ ಅನುಪಲ್ಲವಿ, ಬಾ ನಲ್ಲೆ ಮಧುಚಂದ್ರಕೆ, ಅಪ್ಪು ನಟನೆಯ ರಾಜಕುಮಾರ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.

ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಆಳ್ವಾಸ ನುಡಿಸಿರಿ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಇವರ ಮುಡಿಗೇರಿವೆ.




Leave a Reply

Your email address will not be published. Required fields are marked *

error: Content is protected !!