ಆರ್ ಸಿಬಿ-ಡೆಲ್ಲಿ ಕಾಳಗ

392

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ 5 ಪಂದ್ಯಗಳಲ್ಲಿ 3 ಗೆದ್ದು, 2ರಲ್ಲಿ ಸೋಲು ಅನುಭವಿಸಿದೆ. ಹೀಗಾಗಿ ಶನಿವಾರ ಡೆಲ್ಲಿ ವಿರುದ್ಧ ನಡೆಯುವ ಪಂದ್ಯ ಕುತೂಹಲ ಮೂಡಿಸಿದೆ.

ಆರ್ ಸಿಬಿಗೆ ಮ್ಯಾಕ್ಸ್ ವೆಲ್, ವಿರಾಟ್, ದಿನೇಶ್ ಕಾರ್ತಿಕ್, ನಾಯಕ ಡುಪ್ಲಸಿ ಬ್ಯಾಟಿಂಗ್ ಪಡೆಯ ಸ್ಫೋಟಕ ಆಟಗಾರರಾಗಿದ್ದಾರೆ. ಬೌಲಿಂಗ್ ನಲ್ಲಿ ಸಿರಾಜ್, ಹರ್ಷಲ್ ಪಟೇಲ್ ಗೆಲುವು ತಂದು ಕೊಡುವ ಬೌಲರ್ ಗಳಾಗಿದ್ದಾರೆ.

ಪಾಯಿಂಟ್ ಪಟ್ಟಿಯಲ್ಲಿ ಆರ್ ಸಿಬಿ 6ನೇ ಸ್ಥಾನದಲ್ಲಿದೆ. ಡೆಲ್ಲಿ 7ನೇ ಸ್ಥಾನದಲ್ಲಿದೆ. ಇದೇ ಮೊದಲ ಬಾರಿಗೆ ಎಂಟ್ರಿ ಕೊಟ್ಟಿರುವ ಗುಜರಾತ್ ಟೈಟನ್ಸ್ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 1ರಲ್ಲಿ ಸೋತು ಮೊದಲ ಸ್ಥಾನದಲ್ಲಿದೆ. ಇನ್ನೊಂದು ಹೊಸ ತಂಡ ಲಖ್ನೋ ಸೂಪರ್ ಜಯಂಟ್ಸ್  5ರಲ್ಲಿ 3 ಗೆದ್ದು 2ರಲ್ಲಿ ಸೋತು 5ನೇ ಸ್ಥಾನದಲ್ಲಿದೆ.




Leave a Reply

Your email address will not be published. Required fields are marked *

error: Content is protected !!