ಮುಂಬೈ ಮಣಿಸಿದ ಡೆಲ್ಲಿ

405

ಪ್ರಾಜಾಸ್ತ್ರ ಕ್ರೀಡಾ ಸುದ್ದಿ

ಮುಂಬೈ: ಐಪಿಎಲ್ ಟೂರ್ನಿಯ 2ನೇ ಪಂದ್ಯದಲ್ಲಿ ಮುಂಬೈ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸಿದೆ. 177 ರನ್ ಗಳ ಗುರಿಯನ್ನು ಮುಟ್ಟಿದ ರಿಷಬ್ ಪಂತ್ ಪಡೆ 5 ಬಾರಿ ಚಾಂಪಿಯನ್ಸ್ ತಂಡವನ್ನು ಸೋಲಿಸಿತು.

ಲಲಿತ್ ಯಾದವ್ 48 ರನ್ ಹಾಗೂ ಅಕ್ಷರ್ ಪಟೇಲ್ 38 ರನ್ ಗಳ ಭರ್ಜರಿ ಬ್ಯಾಟಿಂಗ್ ಮಾಡಿ ಗೆಲುವು ತಂದು ಕೊಟ್ಟರು. ಪೃಥ್ವಿ ಶಾ 38 ರನ್ ಗಳಿಸಿದರು. ನಾಯಕ ಪಂತ್ 1 ರನ್ ಗೆ ಔಟ್ ಆಗಿ ನಿರಾಸೆ ಮೂಡಿಸಿದರು. 18.2 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 179 ರನ್ ಬಾರಿಸಿ ವಿಜಯ ಸಾಧಿಸಿತು. ಮುಂಬೈ ಪರ ಟೆಂಪಿ 3, ಮುರುಗನ್ ಅಶ್ವಿನ್ 2, ಮಿಲ್ಸ್ 1 ವಿಕೆಟ್ ಪಡೆದರು

ಟಾಸ್ ಗೆದ್ದ ಡೆಲ್ಲಿ ನಾಯಕ ಮುಂಬೈ ಟೀಂಗೆ ಬ್ಯಾಟಿಂಗ್ ನೀಡಿದರು. ನಾಯಕ ರೋಹಿತ್ ಶರ್ಮಾ 41, ಇಶಾನ್ ಕಿಸಾನ್ ಅಜೇಯ 81 ರನ್ ಗಳಿಂದಾಗಿ 5 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತು. ಡೆಲ್ಲಿ ಪರ ಕುಲದೀಪ್ ಯಾದವ್ 3, ಕಲೀಲ್ ಅಹ್ಮದ್ 2 ವಿಕೆಟ್ ಪಡೆದು ಮಿಂಚಿದರು.


TAG


Leave a Reply

Your email address will not be published. Required fields are marked *

error: Content is protected !!