ಹ್ಯಾಟ್ರಿಕ್ ಗೆಲುವಿನತ್ತ ಆರ್ ಸಿಬಿ

285

ಪ್ರಜಾಸ್ತ್ರ ಕ್ರೀಡಾಸುದ್ದಿ

ಸತತ ಎರಡು ಪಂದ್ಯಗಳನ್ನು ಗೆದ್ದು 4 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಹ್ಯಾಟ್ರಿಕ್ ಗೆಲುವಿನತ್ತ ಮುಖ ಮಾಡಿದೆ. ಭಾನುವಾರ ಮಧ್ಯಾಹ್ನ 3.30ಕ್ಕೆ ಕೊಲ್ಕತ್ತಾ ನೈಟ್ ರೈಡರ್ಸ್ ಜೊತೆ ಪಂದ್ಯ ನಡೆಯಲಿದ್ದು, ಹ್ಯಾಟ್ರಿಕ್ ಗೆಲುವು ದಾಖಲಿಸಲು ಸಜ್ಜಾಗಿದೆ.

ಸನ್ ರೈಸರ್ಸ್ ಹೈದ್ರಾಬಾದ್ ಜೊತೆಗಿನ ಹಿಂದಿನ ಪಂದ್ಯದಲ್ಲಿ ರೋಚಕ ಗೆಲುವು ದಾಖಲಿಸಿದ ಬೆಂಗಳೂರು ಟೀಂ, ಅಭಿಮಾನಿಗಳಿಗೆ ಕಿಕ್ ನೀಡಿತು. ಬ್ಯಾಟಿಂಗ್ ನಲ್ಲಿ ಎಡವಿದ್ದ ಟೀಂಗೆ ಬೌಲರ್ ಗಳು ಆಸರೆಯಾದರು. ಹೀಗಾಗಿ ಗೆಲುವು ತನ್ನದಾಗಿಸಿಕೊಂಡಿತು. ಇದೀಗ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಇದೆ ಆಟ ಪ್ರದರ್ಶಿಸಲು ಸಜ್ಜಾಗಿದೆ.

ಕೊಹ್ಲಿ, ಮ್ಯಾಕ್ಸ್ ವೆಲ್, ಎಬಿಡಿ, ಪಡಿಕಲ್ ಬ್ಯಾಟಿಂಗ್ ನಲ್ಲಿ ಮಿಂಚುತ್ತಿದ್ದಾರೆ. ಹರ್ಷಲ್ ಪಟೇಲ, ಮೊಹ್ಮದ್ ಸಿರಾಜ್, ಶಹಬಾದ್ ಅಹ್ಮದ್, ಚಹಾಲ್ ಬೌಲಿಂಗ್ ನಲ್ಲಿ ಕಮಲಾ ಮಾಡ್ತಿದ್ದು, ಇಯಾನ್ ಮಾರ್ಗನ್ ನೇತೃತ್ವದ ಕೆಕೆಆರ್ ಟೀಂ ಕಟ್ಟಿ ಹಾಕಲು ಸಜ್ಜಾಗಿದೆ.




Leave a Reply

Your email address will not be published. Required fields are marked *

error: Content is protected !!