ಬೀದಿಗೆ ಬಂದ ಐಪಿಎಸ್ ದಂಪತಿಯ ಜಗಳ: ಧರಣಿ ಕೈಬಿಟ್ಟ ಅಧಿಕಾರಿ

410

ಬೆಂಗಳೂರು: ಐಪಿಎಸ್ ದಂಪತಿಯ ಜಗಳ ಬೀದಿಗೆ ಬಂದ ಪರಿಣಾಮ, ವಿವಿಐಪಿ ಭದ್ರತಾ ಡಿಸಿಪಿಯಾಗಿರುವ ಪತ್ನಿ ಇಲಕಿಯಾ ಕರುಣಾಕರನ್ ಮನೆ ಮುಂದೆ ಕಲಬುರಗಿಯ ಐಎಸ್ ಡಿ ಎಸ್ಪಿಯಾಗಿರುವ ಪತಿ ಅರುಣ ರಂಗರಾಜನ್ ಅವರು ಭಾನುವಾರ ಸಂಜೆ ಧರಣಿ ಕುಳಿತಿದ್ರು.

ಐಪಿಎಸ್ ಅಧಿಕಾರಿ ಅರುಣ ರಂಗರಾಜನ್

ಧರಣಿ ಸ್ಥಳಕ್ಕೆ ಹೈಗ್ರೌಂಡ್ ಠಾಣೆ ಪೊಲೀಸ್ರು ಬಂದು ಮನವೊಲಿಸಲು ಮಾಡಿದ ಪ್ರಯತ್ನ ಕೈಕೊಟ್ಟಿತ್ತು. ಹೀಗಾಗಿ ಅಧಿಕಾರಿಯ ಧರಣಿ ಮಧ್ಯರಾತ್ರಿಯ ತನಕ ನಡೆಯಿತು. ಬಳಿಕ ಬೆಂಗಳೂರು ನಾರ್ತ್ ಡಿಸಿಪಿ ಭೀಮಾಶಂಕರ ಗುಳೇದ ಮಾತ್ನಾಡಿ, ಬೆಳಗ್ಗೆ ಸಂಧಾನ ನಡೆಸಿ ಮಕ್ಕಳ ಮುಖವನ್ನ ನೋಡಲು ಅವಕಾಶ ಮಾಡಿಸಿಕೊಡುವ ಭರವಸೆ ನೀಡಿದ ಬಳಿಕ ಎಸ್ಪಿ ಅರುಣ ಧರಣಿ ಕೈಬಿಟ್ಟಿದ್ದಾರೆ.

ಐಪಿಎಸ್ ಅಧಿಕಾರಿ ಇಲಕಿಯಾ ಕರುಣಾಕರನ್

ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ನಡುವೆ ಮೊದಲ ಮಗುವಾದ್ಮೇಲೆ ಕೌಟುಂಬಿಕ ಕಲಹ ಮೂಡಿದೆ. ಹೀಗಾಗಿ ಇವರು ಡಿವೋರ್ಸ್ ಗೆ ಬಂದಿದ್ರು. ಬಳಿಕ ಮತ್ತೆ ಒಂದಾದ ದಂಪತಿಗೆ ಇನ್ನೊಂದು ಮಗುವಾಗಿದೆ. ಆದ್ರೆ, ಅದೇಕೋ ಈ ದಂಪತಿ ನಡುವೆ ಹೊಂದಾಣಿಕೆ ಬಂದಿಲ್ಲ. ಹೀಗಾಗಿ ಅವರಿಬ್ಬರು ಜೊತೆಯಾಗಿ ಇರ್ಲಿಲ್ಲ. ಮಕ್ಕಳ ಮುಖವನ್ನ ನೋಡಲು ಹೆಂಡ್ತಿ ಬಿಡ್ತಿಲ್ಲವೆಂದು ಹೇಳಿ ಐಪಿಎಸ್ ಅಧಿಕಾರಿ ಅರುಣ, ಬೆಂಗಳೂರಿನ ವಸಂತನಗರದಲ್ಲಿರುವ ಹೆಂಡ್ತಿಯ ಮನೆ ಮುಂದೆ ಭಾನುವಾರ ಸಂಜೆಯಿಂದ ಧರಣಿ ಕುಳಿತಿದ್ರು.




Leave a Reply

Your email address will not be published. Required fields are marked *

error: Content is protected !!