ವಿಚಿತ್ರ ಸುದ್ದಿ:
ಹೊಸಪೇಟೆ: ಹೊಸಪೇಟೆಯಿಂದ ಕೂಡ್ಲಗಿಗೆ ಹರ್ಷಾ ಅನ್ನೋ ವಿದ್ಯಾರ್ಥಿನಿ ತೆರಳುತ್ತಿದ್ದಳು. ವಿದ್ಯಾರ್ಥಿನಿ ಜೊತೆಗೆ ಬೆಕ್ಕಿನ ಮರಿಯೊಂದು ಇತ್ತು. ಇದಕ್ಕೂ ಟಿಕೆಟ್ ತೆಗೆದುಕೊಳ್ಳಬೇಕೆಂದು ಕಂಡಕ್ಟರ್ ಹೇಳಿದ್ದಾನೆ. ಇದಕ್ಕೆ ವಿದ್ಯಾರ್ಥಿನಿ ನಿರಾಕರಿಸಿದ್ದಾಳೆ.
ಬೆಕ್ಕಿನ ಮರಿಗೂ ಟಿಕೆಟ್ ಪಡೆಯುವಂತೆ ಸೂಚಿಸಿದ ಕಂಡಕ್ಟರ್ 22 ರೂಪಾಯಿ ಟಿಕೆಟ್ ನೀಡಿದ್ದಾರೆ. ಬಳಿಕ ವಿದ್ಯಾರ್ಥಿನಿ ತನ್ನ ಬಳಿ ಹಣವೆಲ್ಲವೆಂದು ಹೇಳಿದ್ದಾಳೆ. ನಂತರ ಆಕೆ ತಂದೆಗೆ ಫೋನ್ ಮಾಡಿದ್ದಾಳೆ. ಕೊನೆಗೆ 22 ರೂಪಾಯಿ ಟಿಕೆಟ್ ನ್ನ ಕಂಡಕ್ಟರ್ ಬೆಕ್ಕಿನ ಮರಿಗೆ ನೀಡಿದ್ದು ಅಚ್ಚರಿಗೆ ಕಾರಣವಾಗಿದೆ. ಕೆಲವರು ಕೋಳಿಗೆ ಟಿಕೆಟ್ ನೀಡಿದ ಪ್ರಕರಣಗಳು ಈ ಹಿಂದೆ ನಮ್ಮಲ್ಲಿ ನಡೆದಿರುವುದು ನೆನಪಿಸಿಕೊಳ್ಳಬಹುದು.