ಹಸೆಮಣೆ ಏರಬೇಕಿದ್ದ ಯುವತಿ ವರನ ಮನೆಯಲ್ಲಿ ನಿಗೂಢ ಸಾವು!

129

ಪ್ರಜಾಸ್ತ್ರ ಸುದ್ದಿ

ವಿಜಯನಗರ: ಇನ್ನು ಎರಡು ದಿನಗಳಲ್ಲಿ ಮದುವೆಯಾಗಬೇಕಿದ್ದ ಯುವತಿ ವರನ ಮನೆಯಲ್ಲಿಯೇ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಹೊಸಪೇಟೆ ತಾಲೂಕಿನ ಟಿಬಿ ಡ್ಯಾಂ ಹತ್ತಿ ನಡೆದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದೊಂದು ಕೊಲೆ ಎಂದು ಯುವತಿ ಪೋಷಕರು ಆರೋಪಿಸಿದ್ದಾರೆ.

ಮೃತ ಐಶ್ವರ್ಯ ಹಾಗೂ ಅಶೋಕ್ ಕಳೆದ 6 ವರ್ಷಗಳಿಂದ ಪ್ರೀತಿಸುತ್ತಿದ್ದರಂತೆ. ಇವರಿಬ್ಬರದು ಅಂತರ್ಜಾತಿ ವಿವಾಹವಾಗಿತ್ತು. ಯುವಕನ ಕಡೆಯವರು ಹಲವು ಷರತ್ತುಗಳನ್ನು ಹಾಕಿ ಶಾಸ್ತ್ರದ ಹೆಸರಿನಲ್ಲಿ ಯವತಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದರಂತೆ. ಈ ವೇಳೆ ಹುಡುಗಿ ಕಡೆಯವರು ಯಾರೂ ಬರಬಾರದು ಎಂದಿದ್ದರಂತೆ.

ನಮಗೂ ಅವರಿಗೂ ಹೊಂದಾಣಿಕೆಯಾಗುವುದಿಲ್ಲ. ಮದುವೆ ಬೇಡ ಎಂದು ಮಗಳಿಗೆ ಹೇಳಿದ್ವಿ. ಅವಳು ತುಂಬಾ ಗಟ್ಟಿ. ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ. ಯುವಕನ ಮನೆಯವರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸಿದ್ದಾರೆ.
Leave a Reply

Your email address will not be published. Required fields are marked *

error: Content is protected !!