ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಪೋಸ್ಟರ್ ದಾಳಿ ಮುಂದುವರೆದಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮನೆಗೆ ಅಕ್ರಮವಾಗಿ ವಿದ್ಯುತ್ ಸಂರ್ಪಕ ವಿಚಾರಕ್ಕೆ ಸಂಬಂಧಿಸಿದಂತೆ ಶುರುವಾದ ಪೋಸ್ಟರ್ ವಾರ್ ಇನ್ನು ಮುಂದುವರೆದಿದೆ.
ಸಿನಿಮಾ ಪ್ರಚಾರದ ಮಾದರಿಯಲ್ಲಿ ಪೋಸ್ಟರ್ ಮಾಡಿ ವ್ಯಂಗ್ಯ ಮಾಡಲಾಗಿದೆ. ನಿಮ್ಮ ನೆಚ್ಚಿನ ಚಿತ್ರಮಂದಿರಿಗಳಲ್ಲಿ ಅತೀ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. 70 ಎಂಎಂ, ರಾಧಾ, ಮಾರ, ಬ್ಲೂ ಬಾಯ್ಸ್ ಚಿತ್ರಮಂದಿರಗಳಲ್ಲಿ ಕರೆಂಟ್ ಕಳ್ಳ ಖ್ಯಾತಿಯ ಎಚ್ಚಡಿಕೆ ನಿರ್ಮಾಣದ ಚಿತ್ರ ಪೆನ್ ಡ್ರೈವ್ ಬ್ರದರ್. ನಿರ್ದೇಶನ ಪ್ರಮಾಣಿಕ ಖ್ಯಾತಿಯ ಕರೆಂಟ್ ಕಳ್ಳ. 68 ಸಾವಿರ ರೂಪಾಯಿ ವೆಚ್ಚದಲ್ಲಿ ಎಂದು ಬರೆದಿರುವ ಪೋಸ್ಟರ್ ವೈರಲ್ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ವೈರಲ್ ಆಗಿದೆ. ಈ ಬಗ್ಗೆ ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.