ರಾಜಸ್ಥಾನ ಚುನಾವಣೆ: ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

57

ಪ್ರಜಾಸ್ತ್ರ ಸುದ್ದಿ

ಜೈಪುರ: ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ರಾಜಸ್ಥಾನ ಸಹ ಒಂದು. ಹೀಗಾಗಿ ರಾಜಕೀಯ ಚಟುವಟಿಕೆಗಳು ಜೋರಾಗಿವೆ. ಮಂಗಳವಾರ ಕಾಂಗ್ರೆಸ್ ಹಲವು ಭರವಸೆಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಮುಖ್ಯಮಂತ್ರಿ ಅಶೋಕ್ ಗೆಹಲೋತ್, ಶಾಸಕ ಸಚಿನ್ ಪೈಲೆಟ್ ಸೇರಿ ಅನೇಕರು ಪ್ರಣಾಳಿಕೆ ಬಿಡುಗಡೆ ಮಾಡಿದರು. ಉಜ್ವಲ ಯೋಜನೆಯ ಫಲಾನುಭವಿಗಳಿಗೆ 400 ರೂಪಾಯಿಗೆ ಗ್ಯಾಸ್, ಮನೆ ಒಡತಿಗೆ ವಾರ್ಷಿಕ 10 ಸಾವಿರ ಸಹಾಯಧನ, ರೈತರಿಂದ ಕೆಜಿಗೆ 2 ರೂಪಾಯಿಯಂತೆ ಸಗಣಿ ಖರೀದಿ, ಸರ್ಕಾರಿ ಕಾಲೇಜಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್, ಟ್ಯಾಬ್, ಪ್ರಕೃತಿ ವಿಕೋಪ ವೇಳೆ ನಷ್ಟವಾದರೆ ಪ್ರತಿ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ.

ಹೀಗೆ ಹತ್ತು ಹಲವು ಭರವಸೆಯ ಯೋಜನೆಗಳನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಘೋಷಿಸಿದೆ. 200 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 25ರಂದು ಮತದಾನ ನಡೆಯಲಿದೆ. ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ.
Leave a Reply

Your email address will not be published. Required fields are marked *

error: Content is protected !!