ಹೆಚ್ಡಿಕೆ-ಡಿಕೆಶಿ ಜಟಾಪಟಿ

106

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನಡುವೆ ಬ್ಲೂ ಫಿಲ್ಮ್ ಹೇಳಿಕೆಗೆ ಸಂಬಂಧಿಸಿದಂತೆ ಜಟಾಪಟಿ ನಡೆದಿದೆ. ದೊಡ್ಡ ಆಲಹಳ್ಳಿ ಸುತ್ತಮುತ್ತ ಯಾವನಾದರೂ ಒಬ್ಬ ನಾನು ಬ್ಲೂ ಫಿಲ್ಮ್ ತೋರಿಸಿದೀನಿ ಎಂದು ಹೇಳಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿ ಜೊತೆಗೆ ಗುದ್ದಾಟಕ್ಕೆ ನನಗೆ ಸಮಯವಿಲ್ಲ. ಅವರಿಗೆ ಈಗಲೂ 21 ಥಿಯೇಟರ್ ಗಳಿವೆ. ನಮಗೆ ಉಂಟೇನ್ರಿ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಕನಕಪುರಕ್ಕೆ ಬಂದು ಪ್ರಚಾರ ಮಾಡಿಲ್ಲ. ಬಂದು ಬ್ಲೂ ಫಿಲ್ಮ್ ಬಗ್ಗೆ ಹೇಳಬೇಕಿತ್ತು ಗೊತ್ತಾಗೋದು ಎಂದು ವಾಗ್ದಾಳಿ ನಡೆಸಿದ್ದಾರೆ.

ಟೆಂಟ್ ನಲ್ಲಿ ಬ್ಲೂ ಫಿಲ್ಮ್ ತೋರಿಸಿ ರಾಜಕೀಯ ಜೀವನ ಮಾಡಿಕೊಂಡು ಬಂದವನು. ಆ ರೀತಿ ಪೋಸ್ಟರ್ ಪ್ರಿಂಟ್ ಮಾಡಿಸೋದು ಬಿಟ್ಟು ದೇವರದು ಹಾಕಿಸ್ತಾನಾ? ದೊಡ್ಡ ಆಲಹಳ್ಳಿ ಸಾತನೂರಿನಲ್ಲಿ 2 ಟೆಂಟ್ ಇದ್ವಾಲ್ಲ. ಮಲಿಯಾಳಿ ಸಿನಿಮಾಗಳಿಗೆ ಕಟ್ಟಿಂಗ್ ಸೇರಿಸುತ್ತಿದ್ದಾರಲ್ಲ. ಅದನ್ನು ಮುಂದುವರೆಸಿದ್ದಾರೆ ಎಂದು ಡಿ.ಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಆರೋಪ ಮಾಡಿದ್ದರು. ಇದಕ್ಕೆ ಡಿಕೆಶಿ ಟಾಂಟ್ ಕೊಟ್ಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!