ಮುಂಬೈ ವಿಮಾನ ನಿಲ್ದಾಣದ ಷೇರಿನಲ್ಲಿ ಶೇ 74ರಷ್ಟು ಪಡೆದ ಅದಾನಿ ಗ್ರೂಪ್

322

ಪ್ರಜಾಸ್ತ್ರ ವಾಣಿಜ್ಯೋದ್ಯಮ

ಮುಂಬೈ: ನವಿ ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಯೋಜನೆಯಲ್ಲಿ ಶೇಕಡ 74ರಷ್ಟು ಷೇರನ್ನ ಅದಾನಿ ಗ್ರೂಪ್ ಪಡೆದಿದೆ. ಇಂದು ಅದಾನಿ ಗ್ರೂಪ್ ಅಧಿಕೃತವಾಗಿ ಷೇರು ಪಡೆದಿದೆ.

ವಿಮಾನ ನಿಲ್ದಾಣ ನಿರ್ವಹಣೆಯಲ್ಲಿ ಜಿವಿಕೆ ಪವರ್ ಆಂಡ್ ಇನ್ಪ್ರಾಸ್ಟ್ರಕ್ಚರ್ ಲಿಮಿಟೆಡ್ ತನ್ನ ಅಂಗ ಸಂಸ್ಥೆಗಳಾದ ಜಿವಿಕೆ ಏರ್ ಪೋರ್ಟ್ ಡೆವೆಲಪರ್ಸ್ ಲಿಮಿಟೆಡ್ ಹಾಗೂ ಜಿವಿಕೆ ಏರ್ ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ ನೊಂದಿಗೆ ಅದಾನಿ ಏರ್ ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ ಜೊತೆಗೆ ಹೂಡಿಕೆ ಮಾಡಿವೆ.

ದಕ್ಷಿಣ ಆಫ್ರಿಕಾದ ಸಿಎಸ್ಎ ಮತ್ತು ಬಿಡ್ ವೆಸ್ಟ್ ನಿಂದ ಶೇಕಡ 23.5ರಷ್ಟು ಷೇರನ್ನ ಅದಾನಿ ಗ್ರೂಪ್ ಪಡೆಯುವ ಪ್ರಕ್ರಿಯೆ ಸಧ್ಯದಲ್ಲಿ ನಡೆಸಲಿದೆ ಎಂದು ಹೇಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!