ಕಣಿವೆ ನಾಡಿಗೆ ಮೊದಲ ಮಹಿಳಾ ಐಜಿ: ಸಿಆರ್ ಪಿಎಫ್ ಇತಿಹಾಸದಲ್ಲಿ ಹೊಸ ದಾಖಲೆ

276

ಪ್ರಜಾಸ್ತ್ರ ಸುದ್ದಿ

ಶ್ರೀನಗರ: ಸಿಆರ್ ಪಿಎಫ್ ಇತಿಹಾಸದಲ್ಲಿ ಇದು ಹೊಸ ದಾಖಲೆಯಾಗಿದ್ದು, ಮೊದಲ ಬಾರಿಗೆ ಕಣಿವೆ ನಾಡಿಗೆ ಮಹಿಳಾ ಐಪಿಎಸ್ ಅಧಿಕಾರಿ ನೇಮಕವಾಗಿದೆ. ಶ್ರೀನಗರದ ಕೇಂದ್ರ ರಿಸರ್ವ್ ಪಡೆ ಶ್ರೀನಗರ ವಲಯದ ಐಜಿ ಆಗಿ ನೇಮಕವಾಗಿದ್ದಾರೆ.

1996ರ ಬ್ಯಾಚ್ ತೆಲಂಗಾಣ ಕೇಡರ್ ನ ಐಪಿಎಸ್ ಅಧಿಕಾರಿ ಚಾರು ಸಿನ್ಹಾ ಅವರನ್ನ ಶ್ರೀನಗರದ ಐಜಿ ಆಗಿ ನೇಮಕ ಮಾಡಲಾಗಿದೆ. ಚಾರು ಸಿನ್ಹಾ ಈ ಹಿಂದೆ ಸಿಆರ್ ಪಿಎಫ್ ನಲ್ಲಿ ಬಿಹಾರ ವಲಯದ ಐಜಿಯಾಗಿದ್ರು. ವಿವಿಧ ನಕ್ಸಲ್ ವಿರೋಧಿ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ರು.

ಈ ಮೊದ್ಲು ಚಾರು ಸಿನ್ಹಾ ಅವರನ್ನ ಜಮ್ಮುವಿಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಅವರನ್ನ ಶ್ರೀನಗರದ ಐಜಿಯಾಗಿ ವರ್ಗಾಯಿಸಲಾಗಿದೆ. ಉಗ್ರರ ಚಟುವಟಿಕೆ ಹೆಚ್ಚಿರುವ ಶ್ರೀನಗರದಲ್ಲಿ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯ ನೇಮಕವಾಗಿದೆ.




Leave a Reply

Your email address will not be published. Required fields are marked *

error: Content is protected !!