ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸ್ಯಾಂಡಲ್ ವುಡ್ ಅಂಗಳದಲ್ಲಿ ಐರಾವನ್ ಮೂವಿ ಒಂದಿಷ್ಟು ಸೌಂಡ್ ಮಾಡ್ತಿದೆ. ಜೆಕೆ ಖ್ಯಾತಿಯ ನಟ ಕಾರ್ತಿಕ ಜಯರಾಮ ನಟನೆಯ ಚಿತ್ರದ ಶೂಟಿಂಗ್ ವಿಜಯಪುರದಲ್ಲಿ ನಡೆಯುತ್ತಿದೆ. ಈ ಬಗ್ಗೆ ನಟ ಜೆಕೆ ತಮ್ಮ ಇನ್ಸ್ ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಶೂಟಿಂಗ್ ವೇಳೆ ಸುತ್ತಲು ನಿಂತು ಜನರು ವೀಕ್ಷಣೆ ಮಾಡ್ತಿರುವ ವಿಡಿಯೋವನ್ನ ಸಹ ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳಿಗೆ ಜೆಕೆ ಥ್ಯಾಂಕ್ಸ್ ಹೇಳಿದ್ದಾರೆ.
ರಾಮ್ಸ್ ರಂಗ ಐರಾವನ್ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ನಿರಂತರ ಗಣೇಶ, ನಿರಂತರ ಪ್ರೊಡಕ್ಷನ್ ಮೂಲಕ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಮೂವಿಯಲ್ಲಿ ಜೆಕೆಗೆ ಜೋಡಿಯಾಗಿ ನಟಿ ಅದ್ವಿತಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ.