ಸರ್ಕಾರದ ವಿರುದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಪ್ರತಿಭಟನೆ

242

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರತಿಭಟನೆ ಶುರು ಮಾಡಿವೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿಸಿ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಪ್ರತಿಭಟನೆ ಮಾಡಲಾಗ್ತಿದೆ.

ರಾಜ್ಯದ ಶಾಲಾ, ಕಾಲೇಜುಗಳು ನಿಧಾನವಾಗಿ ಶುರುವಾಗಿವೆ. ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಇದರ ನಡುವೆ ಪ್ರತಿಭಟನೆ ನಡೆಸಲಾಗ್ತಿದೆ. ನಗರದ ಮೌರ್ಯ ವೃತ್ತದಿಂದ ಫ್ರೀಡಂ ಪಾರ್ಕ್ ತನಕ ಬೆಳಗ್ಗೆ 10 ಗಂಟೆಯಿಂದ ರ್ಯಾಲಿ ಶುರುವಾಗಲಿದೆ.

ಖಾಸಗಿ ಶಾಲೆಗಳ ಇಎಂಐ ಕಟ್ಟಲು ಒಂದು ವರ್ಷ ಕಾಲಾವಕಾಶ ಕೊಡಬೇಕು. 1995ರ ಶುರುವಾದ ಅನುದಾನ ರಹಿತಿ ಶಾಲೆಗಳಿಗೆ ಅನುದಾನ ನೀಡಬೇಕು ಅನ್ನೋದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!