ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಇರ್ಫಾನ ಅಂತ್ಯಕ್ರಿಯೆ

419

ಬಾಲಿವುಡ್ ನಟ ಇರ್ಫಾನ ಖಾನ್ ಇಂದು ಮಧ್ಯಾಹ್ನ ನಿಧನಹೊಂದಿದ್ದು, ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂಬೈನ ವರ್ಸೊವಾ ರುದ್ರಭೂಮಿಯಲ್ಲಿ ಅಂತಿಮ ವಿಧಿವಿಧಾನ ನಡೆಯಿತು.

ಪತ್ನಿ ಸುತಪಾ ಸಿಕ್ದರ್, ಮಕ್ಕಳಾದ ಅಯಾನ್ ಹಾಗೂ ಬಬಿಲ್ ಸೇರಿದಂತೆ ಕೆಲವೇ ಕೆಲವು ಕುಟುಂಬಸ್ಥರು, ಆಪ್ತರು ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ಈ ವೇಳೆ ಸಹ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು. ಮಸ್ಕ್ ಸಹ ಧರಿಸಲಾಗಿತ್ತು.

ಖ್ಯಾತ ನಟನ ನಿಧನಕ್ಕೆ ಇಡೀ ಭಾರತೀಯ ಸಿನಿ ರಂಗ ಕಂಬನಿ ಮಿಡಿದಿದೆ. ಬಾಲಿವುಡ್ ಅಂಗಳದ ಖ್ಯಾತ ನಟ, ನಟಿಯರು ಸಂತಾಪ ಸೂಚಿಸುವ ಮೂಲಕ ಅಗಲಿದ ಪ್ರತಿಭಾನ್ವಿತ ನಟನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!