ಪ್ರಜಾಸ್ತ್ರ ಸುದ್ದಿ
ಕೇಂದ್ರದ ಮಾಜಿ ಸಚಿವೆ, ಬಿಜೆಪಿ ಸಂಸದೆ ಮನೇಕಾ ಗಾಂಧಿ, ಇಸ್ಕಾನ್ ಭಾರತದ ಅತಿದೊಡ್ಡ ವಂಚಕ ಸಂಸ್ಥೆ. ಹರೇ ರಾಮ್ ಹರೇ ಕೃಷ್ಣ ಎಂದು ಹೇಳುತ್ತಲೇ ಕಟುಕರಿಗೆ ಗೋವುಗಳನ್ನು ಮಾರಾಟ ಮಾಡುತ್ತಾರೆ ಅನ್ನೋ ಗಂಭೀರ ಆರೋಪ ಮಾಡಿದ್ದಾರೆ.
ಮನೇಕಾ ಗಾಂಧಿ ನೀಡಿದ ಹೇಳಿಕೆಯ ಹಳೆಯ ವಿಡಿಯೋ ಇದೀಗ ವೈರಲ್ ಆಗಿದೆ. ರಾಷ್ಟ್ರೀಯ ಲೋಕದಳದ ರಾಷ್ಟ್ರೀಯ ಪ್ರಚಾರ ಉಸ್ತುವಾರಿ ಪ್ರಶಾಂತ್ ಕನೋಜಿಯಾ ಈ ವಿಡಿಯೋವನ್ನು ತಮ್ಮ ಎಕ್ಸ್ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ. ಇವರು ಗೋಶಾಲೆಗಳನ್ನು ನಡೆಸಲು ಸರ್ಕಾರದ ದೊಡ್ಡ ದೊಡ್ಡ ಜಮೀನು, ಸೌಲಭ್ಯ ಎಲ್ಲವನ್ನು ಪಡೆಯುತ್ತಾರೆ. ಹಾಲಿನಲ್ಲಿಯೇ ಜೀವನ ಇದೆ ಎಂದು ಹೇಳುತ್ತಾರೆ. ಆದರೆ, ಕಟುಕರಿಗೆ ಇವರು ಮಾರಿದಷ್ಟು ಗೋವುಗಳನ್ನು ಯಾರೂ ಮಾರಿಲ್ಲ ಎಂದು ಹೇಳಿರುವ ಒಂದು ನಿಮಿಷದ ವಿಡಿಯೋ ವೈರಲ್ ಆಗಿದೆ.
ಇದು ಯಾವಾಗ, ಎಲ್ಲಿ, ಯಾವ ಕಾರಣಕ್ಕೆ ಪ್ರಸ್ತಾಪವಾಗಿದೆ ಅನ್ನೋದರ ಕುರಿತು ಸ್ಪಷ್ಟತೆ ಇಲ್ಲ. ಬಿಜೆಪಿ ಮಾಜಿ ಕೇಂದ್ರ ಸಚಿವೆ, ಸಂಸದೆಯಿಂದಲೇ ಇಂತಹ ಗಂಭೀರ ಆರೋಪ ಕೇಳಿ ಬಂದಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.