ಬ್ರೇಕಿಂಗ್ ನ್ಯೂಸ್
Search

ಜೆಡಿಎಸ್ ಗೆ ಮಾಜಿ ಶಾಕ ಶಫಿ ಅಹಮದ್ ರಾಜೀನಾಮೆ

108

ಪ್ರಜಾಸ್ತ್ರ ಸುದ್ದಿ

ತುಮಕೂರು: ಬಿಜೆಪಿಯೊಂದಿಗೆ ಜೈಡಿಎಸ್ ಮೈತ್ರಿ ಮಾಡಿಕೊಂಡ ಕಾರಣಕ್ಕೆ, ಪಕ್ಷದಿಂದ ಒಬ್ಬೊಬ್ಬರೇ ಹೆಜ್ಜೆ ಹೊರಗೆ ಇಡುತ್ತಿದ್ದಾರೆ. ಅದರಲ್ಲೂ ಅಲ್ಪಸಂಖ್ಯಾತ ಸಮುದಾಯದ ನಾಯಕರು ಜೆಡಿಎಸ್ ಪಕ್ಷದಿಂದ ಜಾಗ ಖಾಲಿ ಮಾಡುತ್ತಿದ್ದಾರೆ. ಬುಧವಾರ ಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಶಫಿ ಅಹಮದ್ ರಾಜೀನಾಮೆ ಸಲ್ಲಿಸಿದ್ದಾರೆ.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ವಾಟ್ಸಪ್ ಮೂಲಕ ರಾಜೀನಾಮೆ ಪತ್ರ ಕಳಿಸಿದ್ದಾರೆ. ತುಮಕೂರಿನ ಅಲ್ಲಸಂಖ್ಯಾತ ಸಮುದಾಯದ ಪ್ರಬಲ ನಾಯಕ, ಮಾಜಿ ಶಾಸಕ ಶಫಿ ಅಹಮದ್ ಜೆಡಿಎಸ್ ನಿಂದ ಹೊರ ಬಂದಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರು. ಈಗ ಮರಳಿ ಕಾಂಗ್ರೆಸ್ ಗೆ ಬರುತ್ತಾರ ಕಾದು ನೋಡಬೇಕು. ಕಳೆದ ಶನಿವಾರ ರಾಜ್ಯ ಉಪಾಧ್ಯಕ್ಷ ಸೈಯದ್ ಶಫಿವುಲ್ಲಾ ಸಾಹೇಬ್ ರಾಜೀನಾಮೆ ನೀಡಿದ್ದರು. ಜೆಡಿಎಸ್ ಪಾಳೆಯದಿಂದ ಮುಸ್ಲಿಂ ಸಮುದಾಯದ ನಾಯಕರು ಹೊರ ನಡೆಯುತ್ತಿದ್ದು, ಲೋಕಸಭೆ ಚುನಾವಣೆಯಲ್ಲಿ ಯಾವ ಪರಿಣಾಮ ಬೀರುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!