‘ಜೆ ಮತ್ತು ಕೆ’ಗೆ ಹಿಂದೂ ಸಿಎಂ?

396

ನವದೆಹಲಿ: ಜಮ್ಮು-ಕಾಶ್ಮೀರ್ ದಲ್ಲಿ ಕ್ಷೇತ್ರ ಮರುವಿಂಗಡಣೆಗೆ ಇರುವ ನಿರ್ಬಂಧವನ್ನ ರದ್ದುಗೊಳಿಸಲು ಕೇಂದ್ರ ಸರ್ಕಾರ ಪ್ಲಾನ್ ಮಾಡಿದೆ. ಹೀಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಜಮ್ಮು-ಕಾಶ್ಮೀರ್ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ರು.

ಒಂದು ವೇಳೆ ಈ ನಿರ್ಬಂಧ ರದ್ದುಗೊಂಡ್ರೆ ಮತದಾರರ ನಕ್ಷೆ ಕಂಪ್ಲೀಟ್ ಬದಲಾಗಲಿದೆ. ಜಮ್ಮುವಿನಲ್ಲಿ ಕಡಿಮೆ ಕ್ಷೇತ್ರಗಳಿದ್ದು, ಕಾಶ್ಮೀರದಲ್ಲಿ 46 ಕ್ಷೇತ್ರಗಳಿವೆ. ಹೀಗಾಗಿ ಇದರಿಂದ ಜಮ್ಮುವಿಗೆ ಹೆಚ್ಚಿನ ಸ್ಥಾನ ಕಲ್ಪಿಸುವ ಚಿಂತನೆ ನಡೆಸಲಾಗ್ತಿದ್ದು, ಈ ನಿಟ್ಟಿನಲ್ಲಿ ಇಂದು ಸಭೆ ನಡೆದಿದ್ದು, ಆಯೋಗ ರಚಿಸಲು ಪ್ಲಾನ್ ಮಾಡಲಾಗ್ತಿದೆ.

1939ರಲ್ಲಿ ಜಮ್ಮುವಿಗೆ 30, ಕಾಶ್ಮೀರಕ್ಕೆ 40 ಹಾಗೂ ಲಡಾಖ್ ಗೆ 2 ಸ್ಥಾನಗಳನ್ನ ನೀಡಲಾಗಿತ್ತು. ಇದೀಗ ಜಮ್ಮು-ಕಾಶ್ಮೀರದಲ್ಲಿ 87 ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ ಕಾಶ್ಮೀರದಲ್ಲಿ 46 ಇದ್ದು, ಜಮ್ಮುವಿನಲ್ಲಿ 37 ಇವೆ. ಇನ್ನು ಲಡಾಖ್ ನಲ್ಲಿ 4 ಸ್ಥಾನಗಳಿವೆ. ಜಮ್ಮುವಿಗೆ ಹೆಚ್ಚಿನ ಕ್ಷೇತ್ರಗಳನ್ನ ನೀಡಿದ್ರೆ, ಮುಂದಿನ ದಿನಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಹಿಂದೂ ಸಿಎಂ ಆಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.


TAG


Leave a Reply

Your email address will not be published. Required fields are marked *

error: Content is protected !!