ಜ.16ರಿಂದ ದೇಶ್ಯಾದ್ಯಂತ ಕೋವಿಡ್ ಲಸಿಕೆ ಪ್ರಾರಂಭ

264

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಸೋಮವಾರ ಸಂಜೆ ಪ್ರಧಾನಿ ಮೋದಿ, ಎಲ್ಲ ರಾಜ್ಯಗಳ ಮುಖ್ಯಂತ್ರಿಗಳ ಜೊತೆ ಕೋವಿಡ್ ಲಸಿಕೆ ಕುರಿತು ಮಾತುಕತೆ ನಡೆಸಿದ್ರು. ವಿಡಿಯೋ ಕಾನ್ಫ್ ರೆನ್ಸ್ ಮೂಲಕ ಮಾತ್ನಾಡಿದ ಪ್ರಧಾನಿ, ಜನವರಿ 16ರಿಂದ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆ ನಡೆಯಲಿದೆ ಎಂದರು.

ದೇಶಿಯವಾಗಿ ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಬಳಕೆ ಮಾಡಲು ಅನುಮತಿ ಸಿಕ್ಕಿದೆ. ಈ ಲಸಿಕೆ ಅಭಿಯಾನ ಬೇರೆ ದೇಶಗಳಿಗೆ ಮಾದರಿಯಾಗಬೇಕು. 3 ಕೋಟಿ ಜನರಿಗೆ ಲಸಿಕೆ ನೀಡಿದ ನಂತರು ನಾವು ಮತ್ತೆ ಚರ್ಚಿಸೋಣ ಎಂದು ಪ್ರಧಾನಿ ಮೋದಿ ಹೇಳಿದ್ರು.

ಕೊವಿಶೀಲ್ಡ್ ಪ್ರತಿ ಡೋಸ್ ಬೆಲೆ 220 ರೂಪಾಯಿ ಇದೆ. ಮೊದಲ ಹಂತವಾಗಿ ಆರೋಗ್ಯ ಸಿಬ್ಬಂದಿ, ಕರ್ಮಚಾರಿಗಳು ಸೇರಿದಂತೆ ಫ್ರೆಂಟ್ ಲೈನ್ ವಾರಿಯರ್ಸ್ ಗಳಿಗೆ ನೀಡಲಾಗುವುದು. ಈ ಬಗ್ಗೆ ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದರು. ವಿಡಿಯೋ ಕಾನ್ಫ್ ರೆನ್ಸ್ ವೇಳೆ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ.ಕೆ ಸುಧಾಕರ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ರು.

ರಾಜ್ಯದಲ್ಲಿ ಜನವರಿ 16ರಿಂದ 135 ಕೇಂದ್ರಗಳ ಮೂಲಕ 16 ಲಕ್ಷ ಕರೋನಾ ವಾರಿಯರ್ಸ್ ಗಳಿಗೆ ಲಸಿಕೆ ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!