ಮೈ-ಮನ ಕಿರುಚಿತ್ರಕ್ಕೆ ಶುಭ ಕೋರಿದ ಗಾಯಕ ಲಕ್ಷ್ಮಿರಾಮ್

303

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಮೈಸೂರು: ಮೈ ಮನ ಕಿರುಚಿತ್ರದ ಶೂಟಿಂಗ್ ಗೆ ನಗರದ ಸಾಯಿಬಾಬಾ ದೇವಸ್ಥಾನದಲ್ಲಿ ಸೋಮವಾರ ಚಾಲನೆ ನೀಡಲಾಯ್ತು. ಈ ವೇಳೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ಜಾನಪದ ಗಾಯಕ, ಸಂಸ್ಕೃತಿಕ ಚಿಂತಕ ಲಕ್ಷ್ಮಿರಾಮ್ ಮಾತ್ನಾಡಿ, ಹೆಣ್ಣು ಭೋಗದ ವಸ್ತು, ಸೂಳೆ, ದೇವದಾಸಿ ಎನ್ನುತ್ತಿದ್ದ ಕಾಲದಲ್ಲೇ ಹೆಣ್ಣನ್ನು ಶರಣೆಯನ್ನಾಗಿ ಕಂಡ ಪುಣ್ಯ ಭೂಮಿ ಕರ್ನಾಟಕ ಎಂದರು.

ಸ್ವತಂತ್ರಕ್ಕೆ ಅರ್ಹಳಲ್ಲ ಎಂದು ಸಂಹಿತೆಯಿದ್ದ ಕಾಲದಲ್ಲೇ ಹೆಣ್ಣನ್ನು ಬಸವಣ್ಣನವರ ನೇತೃತ್ವದಲ್ಲಿ ನಡೆದ ಶರಣ ಚಳವಳಿ ಶರಣೆ ಮಾಡಿ ಗೌರವಿಸಿ ಮನ್ನಣೆ ನೀಡಿತು. ಆಮ್ರಪಾಲಿ ಎಂಬ  ರಾಜ ನರ್ತಕಿ ಬುದ್ಧನಿಂದ ಬಿಕ್ಕುಣಿಯಾಗಿದ್ದು ಜಗತ್ತಿನಲ್ಲಿ ದಾಖಲೆಯಾಗಿರುವ ಮೊದಲ ಪರಿವರ್ತನೆಯಾಗಿದೆ. ಈ ನಿಟ್ಟಿನಲ್ಲಿ ಕಲಾವಿದ, ನಿರ್ದೇಶಕ ಸಂತೋಷ್ ವಿಭಿನ್ನ ಕಥಾ ಹಂದರವಿಟ್ಟುಕೊಂಡು ಉತ್ತಮ ಸಂದೇಶ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಯಶಸ್ಸು ಸಿಗಲಿ ಎಂದರು.

ಪೂಜ್ಯ ಜ್ಞಾನಪ್ರಕಾಶ ಸ್ವಾಮೀಜಿಗಳು ಸಹ ತಂಡಕ್ಕೆ ಶುಭ ಹಾರೈಸಿದ್ರು. ಈ ವೇಳೆ ನೃತ್ಯ ನಿರ್ದೇಶಕ ಮೈಸೂರು ರಾಜು, ರಂಗಕರ್ಮಿ ಉದಯಕುಮಾರ, ಕಲಾವಿದೆ ನಾಗರತ್ನ, ಮೈ ಮನ ಚಿತ್ರದ ನಟಿ ಕುಸುಮ ಕುಯ್ಯಮುಡಿ ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!