ನವದೆಹಲಿ: ಪ್ರಧಾನಮಂತ್ರಿ ಬಡವರ ಕಲ್ಯಾಣ ಯೋಜನೆ ಅಡಿಯಲ್ಲಿರುವ ಮಹಿಳೆಯರ ಜನ್ ಧನ್ ಬ್ಯಾಂಕ್ ಖಾತೆಗೆ ಇಂದಿನಿಂದ ಹಣ ವರ್ಗಾವಣೆಯಾಗಲಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವಾಲಯ ಮಾಹಿತಿ ನೀಡಿದೆ. ಇಂದಿನಿಂದ ಏಪ್ರಿಲ್ 9ರ ತನಕ ಹಣ ವರ್ಗಾವಣೆಯಾಗಲಿದೆ.
ಏಪ್ರಿಲ್ 2020ರ ಅವಧಿಯ 500 ರೂಪಾಯಿ ಇಂದಿನಿಂದ ವರ್ಗಾವಣೆಯಾಗಲಿದೆ. 0 ಅಥವ 1 ಸಂಖ್ಯೆಯಿಂದ ಕೊನೆಗೊಳ್ಳುವ ಖಾತೆಗೆ ಏ.3ರಂದು, 2 ಅಥವ 3 ಸಂಖ್ಯೆಯಿಂದ ಕೊನೆಗೊಳ್ಳುವ ಖಾತೆಗೆ ಏ.4ರಂದು, 4 ಅಥವ 5 ಸಂಖ್ಯೆಯಿಂದ ಕೊನೆಗೊಳ್ಳುವ ಖಾತೆಗೆ ಏ.7ರಂದು, 6 ಅಥವ 7 ನಂಬರ್ ನಿಂದ ಮುಗಿಯುವ ಖಾತೆಗೆ ಏ.8ರಂದು ಹಾಗೂ 8 ಅಥವ 9 ನಂಬರ್ ಮೂಲಕ ಅಂತ್ಯವಾಗುವ ಅಕೌಂಟ್ ಗೆ ಏ.9 ರಂದು ಹಣ ವರ್ಗಾವಣೆಯಾಗಲಿದೆ.
ಹಣವನ್ನ ಡ್ರಾ ಮಾಡಿಕೊಳ್ಳುವ ಟೈಂನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ. ಏಪ್ರಿಲ್ 9ರ ನಂತರವೂ ಹಣವನ್ನ ಡ್ರಾ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ.