ಏ.24ಕ್ಕೆ ಸಿಂದಗಿಗೆ ಜನತಾ ಜಲಧಾರೆ

204

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಸಮಗ್ರ ನೀರಾವರಿ ವಿಷಯದ ಹಿನ್ನೆಲೆಯಲ್ಲಿ ಜೆಡಿಎಸ್ ಹಮ್ಮಿಕೊಂಡಿರುವ ಜನತಾ ಜಲಧಾರೆ ಯಾತ್ರೆ ಏಪ್ರಿಲ್ 24ರಂದು ಸಿಂದಗಿಗೆ ಬರಲಿದೆ ಎಂದು ಜೆಡಿಎಸ್ ತಾಲೂಕಾಧ್ಯಕ್ಷ ಗೊಲ್ಲಾಳಪ್ಪಗೌಡ ಪಾಟೀಲ ಹೇಳಿದರು .

ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂಡಿ ಮಾರ್ಗದ ಮೂಲಕ ಸಿಂದಗಿಗೆ ಬರಲಿದೆ. ಭೀಮಾ ನದಿಯ ನೀರನ್ನು ಹೊತ್ತುಕೊಂಡು ಬರಲಿದೆ. ತಾಲೂಕಿನ ನಾಯಕರು ಅದನ್ನು ಗಾಂಧಿ ಸರ್ಕಲ್ ಬಳಿ ಸ್ವಾಗತಿಸಿ, ಬಸವೇಶ್ವರ ಸರ್ಕಲ್ ಮಾರ್ಗವಾಗಿ ದೇವರಹಿಪ್ಪರಗಿ ಮತಕ್ಷೇತ್ರಕ್ಕೆ ಕಳಿಸಿಕೊಡಲಾಗುತ್ತೆ. 2023ರಲ್ಲಿ ಜೆಡಿಎಸ್ ಗೆ ಅವಕಾಶ ನೀಡಿದರೆ, ಕರ್ನಾಟಕದಲ್ಲಿ ಸಮಗ್ರ ನೀರಾವರಿ ಮಾಡಲಾಗುವುದು ಎಂದರು.

ಜೆಡಿಎಸ್ ಮುಖಂಡ ಶಿವಾನಂದ ಪಾಟೀಲ ಸೋಮಜಾಳ ಮಾತನಾಡಿ, ಕರ್ನಾಟಕದಲ್ಲಿ ಹಸರಿ ಕ್ರಾಂತಿಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಜನತಾ ಜಲಧಾರೆ ಯಾತ್ರೆ ಶುರುವಾಗಿದೆ. ಇದು ಮೇ 8ರ ತನಕ ನಡೆಯಲಿದೆ. ಈ ಸಂಕಲ್ಪ ಮೇ 8ರಂದು ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ಸಮಾಪ್ತಿಗೊಳ್ಳುತ್ತೆ ಎಂದರು. ಕುಮಾರಣ್ಣನ ಮಿಷನ್ 123ಗೆ ನಾವೆಲ್ಲ ಕೈಜೋಡಿಸಬೇಕಿದೆ. ಜನತಾ ಜಲಧಾರೆ ಯಾತ್ರೆಯ ರಥವನ್ನು ಸ್ವಾಗತಿಸಲಾಗುತ್ತೆ ಅಂತಾ ಹೇಳಿದರು.

ಈ ವೇಳೆ ಪ್ರಕಾಶ ಹಿರೇಕುರಬರ,  ದಾದಾಫೀರ ಅಂಗಡಿ, ಪ್ರಶಾಂತ ಸಾರೋಟಗಿ, ಶಿವು ಗಬಸಾವಳಗಿ, ಆಶಿಫ ಗಣಿಹಾರ, ಮಹಾಂತೇಶ ಪಾರಗೊಂಡ, ಹುಸೇನ ಮಾಡಬಾಳ, ಎಂ.ಎನ್ ಪಾಟೀಲ, ಅಕ್ಬರ ಮುಲ್ಲಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!