ರಸ್ತೆ ಮಧ್ಯ ಹೊತ್ತಿ ಉರಿದ ಲಾರಿ

457

ಪ್ರಜಾಸ್ತ್ರ ಸುದ್ದಿ

ಹಾವೇರಿ: ಚಲಿಸುತ್ತದ್ದ ವೇಳೆಯಲ್ಲಿ ಲಾರಿಯೊಂದು ಹೊತ್ತಿ ಉರಿದ ಘಟನೆ ಜಿಲ್ಲೆಯ ಶಿಗ್ಗಾವಿ ತಾಲೂಕಿನ ರಾಮನಕೊಪ್ಪ ಗ್ರಾಮದ ಹತ್ತಿರ ನಡೆದಿದೆ. ಚಾಲಕ ಹಾಗೂ ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.

ಬಣ್ಣದ ಡಬ್ಬಿಗಳು, ಮೋಟರ್ ಆಯಿಲ್ ಬಾಕ್ಸ್ ಗಳು, ಡ್ರಿಲ್ಲಿಂಗ್ ಮಷಿನ್ ಗಳು ಸೇರಿದಂತೆ ಸುಮಾರು 2 ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗಾಹುತಿ ಆಗಿವೆ. ಹಾವೇರಿ ಕಡೆಯಿಂದ ಬರುತ್ತಿದ್ದಾಗ, ಶೌಚಾಲಯಕ್ಕೆಂದು ಲಾರಿ ನಿಧನ ಮಾಡಿದಾಗ ಬೆಂಕಿ ಹೊತ್ತಿಕೊಂಡಿದೆ. ತಡಸ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!