ಮೈಕ್ ಹಚ್ಚಿ ಪ್ರಾರ್ಥಿಸುವುದು ನಿಲ್ಲಿಸಿ ಎಂದ ಅಖ್ತರ್

448

ಮುಂಬೈ: ಖ್ಯಾತ ಹಿರಿಯ ಬರಹಗಾರ, ಗೀತ ರಚನೆಗಾರ ಜಾವೇದ್ ಅಖ್ತರ್ ಅವರು, ಮೈಕ್ ಹಚ್ಚಿ ಪ್ರಾರ್ಥಿಸುವುದನ್ನ ಈಗ್ಲಾದ್ರೂ ನಿಲ್ಲಿಸಿಯೆಂದು ಟ್ವೀಟ್ ಮಾಡಿದ್ದಾರೆ. ಅಜಾನ್ ನಂಬಿಕೆಯ ಅವಿಭಾಜ್ಯ ಅಂಗ. ಅದೊಂದು ಗ್ಯಾಜೆಟ್ ಅಲ್ಲವೆಂದು ಹೇಳಿದ್ದಾರೆ.

ಭಾರತದಲ್ಲಿ ಸುಮಾರು 50 ವರ್ಷ ಅಜಾನ್ ನಿಷೇಧಿಸಲಾಗಿತ್ತು. ಮತ್ತೆ ಅನುಮತಿಸಲಾಯ್ತು. ಇದಕ್ಕೆ ಕೊನೆಯಿಲ್ಲ. ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಲೌಡ್ ಸ್ಪೀಕರ್ ಇಲ್ಲದೆ ಅಜಾನ್ ನೀಡಲಾಗಿದೆ. ಇದು ನಂಬಿಕೆಯ ವಿಷಯವೇ ಹೊರತು ತಂತ್ರಜ್ಞಾನವಲ್ಲ. ಹಬ್ಬದ ದಿನಗಳಲ್ಲಿ ಬಳಿಸಿದ್ರೆ ಓಕೆ. ಪ್ರತನಿತ್ಯ ಧ್ವನಿವರ್ಧಕ ಬಳಿಸುವುದನ್ನ ಈಗ್ಲಾದ್ರೂ ನಿಲ್ಲಿಸಬೇಕು ಎಂದಿದ್ದಾರೆ.

ಕರೋನಾದಿಂದಾಗಿ ಕಾಬಾ ಹಾಗೂ ಮದೀನಾವನ್ನ ಸಹ ಮುಚ್ಚಲಾಯ್ತು. ಪವಿತ್ರ ರಂಜಾನ್ ಹಬ್ಬವನ್ನ ಮನೆಯಲ್ಲಿ ಪ್ರಾರ್ಥಿಸಿ. ನಿಮ್ಮ ಪ್ರಾರ್ಥನೆಯಿಂದ ಬೇರೆಯವರಿಗೆ ತೊಂದರೆಯಾಗಬಾರದು ಎಂದು ಹೇಳಿದ್ದಾರೆ. ದೇವಾಲಯಗಳಲ್ಲಿಯೂ ಲೌಡ್ ಸ್ಪೀಕರ್ ಬಳಸಲಾಗುತ್ತೆ ಎಂದು ಕೇಳಿದ್ದಕ್ಕೆ, ನಿತ್ಯದ ಬಳಕೆ ಆತಂಕಕ್ಕೆ ಕಾರಣವೆಂದು ಹೇಳಿದ್ದಾರೆ. ಮತ್ತೊಬ್ಬರು ನಿಮ್ಮ ಫೋನ್ ನ್ನ ಸೋನು ನಿಗಮ್ ಬಳಸುತ್ತಿರಬಹುದು ಎಂದು ಕಾಲೆಳೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!