ಕೋವಿಡ್ ನಿಯಮ ಉಲ್ಲಂಘನೆ: ಜೋಫ್ರಾ ಔಟ್

510

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಲಂಡನ್: ಮಾರಕ ಕರೋನಾ ಸೋಂಕಿನ ಭಯದ ನಡುವೆಯೂ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವೆ ಟೆಸ್ಟ್ ಪಂದ್ಯ ನಡೆಯುತ್ತಿದೆ. ಆದ್ರೆ, ಮ್ಯಾಂಚೆಸ್ಟರ್ ನಲ್ಲಿ ಇಂಗ್ಲೆಂಡ್ ಬೌಲರ್ ಜೋಫ್ರಾ ಆರ್ಚರ್ ಕೋವಿಡ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ, 2ನೇ ಪಂದ್ಯದಿಂದ ಔಟ್ ಮಾಡಲಾಗಿದೆ.

ನಿಯಮ ಮುರಿದ ಜೋಫ್ರಾನನ್ನ 5 ದಿನಗಳ ಕಾಲ ಐಸೋಲೇಷನ್ ನಲ್ಲಿ ಇಡಲಾಗಿದೆ. ವರದಿ ನೆಗೆಟಿವ್ ಬಂದ್ರೆ ಮಾತ್ರ ಐಸೋಲೇಷನ್ ಅವಧಿ ಮುಕ್ತಾಯವೆಂದು ಹೇಳಲಾಗಿದೆ. ತನ್ನಿಂದ ಆದ ತಪ್ಪಿಗೆ ಜೋಫ್ರಾ ಕ್ಷಮೆ ಕೇಳಿದ್ದಾನೆ. ಇಂದಿನಿಂದ ದ್ವಿತೀಯ ಟೆಸ್ಟ್ ಪಂದ್ಯ ಶುರುವಾಗಿದೆ. 13 ಜನ ಆಟಗಾರರ ಬಳಗದಲ್ಲಿ ಜೋಫ್ರಾ ಸ್ಥಾನ ಪಡೆದಿದ್ದ.




Leave a Reply

Your email address will not be published. Required fields are marked *

error: Content is protected !!