ತವರಿನಲ್ಲಿ ಗೆದ್ದು ಬೀಗಿದ ಸ್ಮೃತಿ ಟೀಂ

139

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಆರ್ ಸಿಬಿ ಪಡೆ ತವರಿನಲ್ಲಿ ಆಡಿದ ಕೊನೆಯ ಪಂದ್ಯದಲ್ಲಿ ಗೆಲ್ಲುವ ಮೂಲಕ ತನ್ನ ಲಯಕ್ಕೆ ಮರಳಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಮವಾರ ಸಂಜೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಉತ್ತರ ಪ್ರದೇಶ ವಾರಿಯರ್ಸ್ ತಂಡದ ನಾಯಕಿ ಆಲ್ಸ್ ಹೆಲ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ  ತಂಡ, ನಾಯಕಿ ಸ್ಮೃತಿ ಮಂದಾನ ಭರ್ಜರಿ 80 ರನ್, ಎಲ್ಸ್ ಪೆರಿ ಅಬ್ಬರದ 58 ರನ್ ಗಳಿಂದಾಗಿ 3 ವಿಕೆಟ್ ನಷ್ಟಕ್ಕೆ 198 ರನ್ ಗಳಿಸುವ ಮೂಲಕ ಉತ್ತರ ಪ್ರದೇಶ ವಾರಿಯರ್ಸ್ ತಂಡಕ್ಕೆ ಬಿಗ್ ಚಾಲೆಂಜ್ ನೀಡಿತ್ತು. ಯುಪಿ ಪರ ಅಂಜಲಿ ಶ್ರಾವಣಿ, ದೀಪ್ತಿ ಶರ್ಮಾ, ಸೋಫಿಯಾ ಎಕ್ಲಸ್ಟನ್ ತಲಾ 1 ವಿಕೆಟ್ ಪಡೆದರು.

199 ರನ್ ಗಳ ಗುರಿ ಬೆನ್ನು ಹತ್ತಿದ ಯುಪಿ ವಾರಿಯರ್ಸ್, 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 175 ರನ್ ಗಳಿಸ ಸೋಲು ಕಂಡಿತು. ನಾಯಕಿ ಹೆಲ್ಲಿ 55 ರನ್ ಬಿಟ್ಟರೆ, ದೀಪ್ತಿ ಶರ್ಮಾ 33 ರನ್ ಗಳಿಸಿದ್ದು ಗರಿಷ್ಠ ಸ್ಕೋರ್ ಆಗಿದೆ. ಆರ್ ಸಿಬಿ ಪರ ಸೋಫಿಯಾ ದೇವಿನಿ 2, ಸೋಫಿಯಾ ಮೊಲಿನೆಕ್ಸ್ 2, ಜಾರ್ಗಿಯಾ 2, ಶೋಬನ್ ಆಶಾ 2 ವಿಕೆಟ್ ಪಡೆದರು. ಸ್ಮೃತಿ ಮಂದಾನ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಲೀಗ್ ನ ಮೊದಲ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಆರ್ ಸಿಬಿ ನಂತರದ 2 ಪಂದ್ಯಗಳಲ್ಲಿ ಸೋಲು ಕಂಡಿತು. 5ನೇ ಪಂದ್ಯದಲ್ಲಿ ಜಯ ಸಾಧಿಸಿ ಟ್ರ್ಯಾಕ್ ಗೆ ಮರಳಿದೆ.




Leave a Reply

Your email address will not be published. Required fields are marked *

error: Content is protected !!