ಕನಕದಾಸರ ಜಯಂತಿ ಪ್ರಯುಕ್ತ ವಿಭಿನ್ನ ಕಾರ್ಯಕ್ರಮ

415

ಸಿಂದಗಿ: ಹಾಲುಮತ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ತಾಲೂಕು ಕುರುಬರ ಸಂಘದ ವತಿಯಿಂದ ಪಟ್ಟಣದಲ್ಲಿ ಕನಕದಾಸರ ಜಯಂತಿ ಆಚರಣೆ ಮಾಡಲಾಗ್ತಿದೆ. ಈ ಕುರಿತು ಮಾಧ್ಯಮಗೋಷ್ಠಿ ನಡೆಸಿದ ಸಮಾಜದ ಮುಖಂಡರು, ಕನಕದಾಸರ ಆಶಯಗಳಂತೆ ಈ ಬಾರಿ ಜಯಂತಿ ಆಚರಣೆ ಮಾಡಲಾಗ್ತಿದೆ ಅಂತಾ ಹೇಳಿದ್ರು.

ಈ ವೇಳೆ ಮಾತ್ನಾಡಿದ ಎ.ಆರ್ ಹೆಗ್ಗನದೊಡ್ಡಿ ಅವರು, ಸ್ಥಳೀಯ ಸಂಗಮೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ. ಮೊದಲು ಪಟ್ಟಣದಲ್ಲಿ ಕನಕದಾಸರ ಬೃಹತ್ ಫೋಟೋದೊಂದಿಗೆ ಮೆರವಣಿಗೆ ನಡೆಸಲಾಗುತ್ತೆ. ಈ ವೇಳೆ ಪುರುಷ ಮತ್ತು ಮಹಿಳಾ ಡೊಳ್ಳು ಕುಣಿತ ಸೇರಿದಂತೆ ಹಲವು ಕಲಾತಂಡಗಳು ಭಾಗವಹಿಸುತ್ತೇವೆ ಅಂತಾ ಹೇಳಿದ್ರು.

ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಕನಕದಾಸರ ಕೀರ್ತನೆ ಗಾಯನ ಸ್ಪರ್ಧೆ ಏರ್ಪಡಿಸಿದ್ದು, ನಗದು ಬಹುಮಾನ ನೀಡಲಾಗುತ್ತೆ. ಸಾಹಿತ್ಯ, ಪತ್ರಿಕೋದ್ಯಮ, ಶೈಕ್ಷಣಿಕ, ಕೃಷಿ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ. ಎಸ್ಎಸ್ಎಲ್ ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುತ್ತೆ ಅಂತಾ ತಿಳಿಸಿದ್ರು. ಇನ್ನು ಅಂದು ಡಾ.ಯಶವಂತ ಕೊಕ್ಕನವರಿಂದ ವಿಶೇಷ ಉಪನ್ಯಾಸ ಮತ್ತು ಬಾದಾಮಿಯ ಆಕಾಶವಾಣಿ ಕಲಾವಿದರಿಂದ ಗಾನಸುಧೆ ಕಾರ್ಯಕ್ರಮ ನಡೆಯುತ್ತೆ ಎಂದರು.

ತಾಲೂಕು ಕುರುಬ ಸಂಘದ ಅಧ್ಯಕ್ಷ ಶರಣಪ್ಪ ಹಿರೇಕುರಬರ, ಕೆಂಚಪ್ಪ ಪೂಜಾರಿ, ಪ್ರಕಾಶ ಹಿರೇಕುರಬರ, ರಾಶಿ ವಾಡೇದ, ನಾಗಪ್ಪ ಶಿವೂರ, ಶಿವಾನಂದ ಗಣಿಹಾರ, ಸಿದ್ದಣ್ಣ ಬೀರಗೊಂಡ, ಶ್ರೀನಿವಾಸ ಉಕಲಿ, ರಾಜು ಹಿರೇಕುರಬರ, ಅಮೋಘ ಹೂಗಾರ, ರವಿ, ಬೀರು, ಕುಮಾರ, ದತ್ತು ಯಡಗಿ ಸೇರಿದಂತೆ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!