ಹಿಂದಿ ಬೆಲ್ ಬಾಟಮ್ ಕನ್ನಡದ ರಿಮೇಕಾ?

413

ನಟ ಅಕ್ಷಯಕುಮಾರ ನಟನೆಯ ಬೆಲ್ ಬಾಟಮ್ ಸಿನ್ಮಾ ಬರ್ತಿದೆ. ಪೋಸ್ಟರ್ ಶೇರ್ ಮಾಡಿಕೊಂಡಿರುವ ನಟ ಅಕ್ಕಿ, ಅಭಿಮಾನಿಗಳಿಗೆ ಒಂದಿಷ್ಟು ಕುತೂಹಲ ಮೂಡಿಸಿದ್ದಾರೆ. ಇದರ ಜೊತೆಗೆ ಕನ್ನಡಿಗರು ಇದು ನಮ್ಮ ಕನ್ನಡ ಸಿನ್ಮಾದ ರಿಮೇಕ್ ಅಂತಾ ಅಂದುಕೊಂಡಿದ್ರು.

ನಿರ್ದೇಶಕ ಜಯತೀರ್ಥ ಆ್ಯಕ್ಷನ್ ಕಟ್ ಹೇಳಿದ್ದ ಬೆಲ್ ಬಾಟಮ್ ಸಿನ್ಮಾ ಭರ್ಜರಿ ಸಕ್ಸಸ್ ಕಂಡಿತು. ರಿಷಬ್ ಶೆಟ್ಟಿ ಮೊದಲ ಚಿತ್ರದಲ್ಲಿಯೇ ನಟನೆಯನ್ನ ಸಾಬೀತು ಮಾಡಿದ್ರು. ಇದು ಹಿಂದೆಯಲ್ಲಿ ಬರ್ತಿದೆ ಅನ್ನೋ ಗಾಸಿಪ್ ಜೋರಾಗಿತ್ತು. ಅಕ್ಕಿ ಪೋಸ್ಟರ್ ಬಿಟ್ಟ ತಕ್ಷಣ ಕನ್ಫರ್ಮ್ ಮಾಡಿಕೊಂಡಿದ್ರು. ಆದ್ರೆ, ಇದು ರಿಮೇಕ್ ಅಲ್ಲ. ಕಂಪ್ಲೀಟ್ ಸ್ವಮೇಕ್ ಅಂತಿದ್ದಾರೆ ಅಕ್ಷಯಕುಮಾರ. ಈ ಮೂಲಕ ಗಾಸಿಪ್ ಗಳಿಗೆ ತೆರೆ ಎಳೆದಿದ್ದಾರೆ.

ನೈಜ ಘಟನೆ ಆಧರಿಸಿ ಸಿನ್ಮಾ ಮಾಡಲಾಗ್ತಿದೆ. ಅದು 2020ರ ಮಧ್ಯದಲ್ಲಿ ಶೂಟಿಂಗ್ ನಡೆಯುತ್ತೆ. 2021ಕ್ಕೆ ತರೆಗೆ ಬರ್ತಿದೆ. ರಂಜಿತ ತಿವಾರಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಪೋಸ್ಟರ್ ಲುಕ್ ನೋಡಿದ್ರೆ ಕನ್ನಡ ಚಿತ್ರದ ರೆಟ್ರೋ ಸ್ಟೈಲ್ ನೆನಪಿಸುತ್ತೆ.




Leave a Reply

Your email address will not be published. Required fields are marked *

error: Content is protected !!