ತೀವ್ರವಾದ ಜೆಎನ್ ಯು ವಿದ್ಯಾರ್ಥಿಗಳ ಪ್ರತಿಭಟನೆ

336

ನವದೆಹಲಿ: ವಿದ್ಯಾರ್ಥಿ ಶುಲ್ಕ ಹೆಚ್ಚಳ ಹಾಗೂ ಹಾಸ್ಟೆಲ್ ನ ನೂತನ ನಿಯಮಾವಳಿಗಳನ್ನ ವಿರೋಧಿಸಿ ಜವಾಹರಲಾಲ್ ನೆಹರು ವಿವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ರು. ಇದು ತೀವ್ರ ಸ್ವರೂಪ ಪಡೆದುಕೊಂಡಿತು.

ಘಟಿಕೋತ್ಸವದ ಟೈಂನಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಭಾಷಣ ಮಾಡ್ತಿದ್ದಾಗ ಆಡಿಟೋರಿಯಂಗೆ ನುಗ್ಗಲು ಯತ್ನಿಸಿದ್ರು. ಪೊಲೀಸ್ರು ಅವರನ್ನ ತಡೆಯಲು ಹರಸಾಹಸ ಮಾಡಿದ್ರು. ಇದಕ್ಕೆ ಬಗ್ಗದೆ ಹೋದಾಗ ಜಲಫಿರಂಗಿ ನಡೆಸಲಾಯ್ತು.

ಶುಲ್ಕದಲ್ಲಿ ಈ ಹಿಂದಿಗಿಂತ ಶೇಕಡ 999ರಷ್ಟು ಹೆಚ್ಚಳವಾಗಿದೆ. ಜೆಎನ್ ಯು ವಿಶ್ವ ವಿದ್ಯಾಲಯದಲ್ಲಿ ಶೇಕಡ 40ರಷ್ಟು ವಿದ್ಯಾರ್ಥಿಗಳು ಬಡತನ ರೇಖೆಗಿಂತ ಕಡಿಮೆ ಆದಾಯವಿರುವವರು ಓದುತ್ತಾರೆ. ಅವರಿಗೆ ನೂತನ ಶುಲ್ಕ ಹೊರೆಯಾಗುತ್ತೆ ಎಂದು ವಿದ್ಯಾರ್ಥಿ ಒಕ್ಕೂಟ ಆರೋಪಿಸಿದೆ. ಇದ್ರಿಂದಾಗಿ ವಿದ್ಯಾರ್ಥಿಗಳು ಹಾಗೂ ವಿವಿ ನಡುವೆಎ ಗುದ್ದಾಟ ಶುರುವಾಗಿದೆ.




Leave a Reply

Your email address will not be published. Required fields are marked *

error: Content is protected !!