ಜೆಎನ್ ಯು ವಿದ್ಯಾರ್ಥಿ ಸೂಸೈಡ್..!

803

ದೆಹಲಿ: ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಜೆಎನ್ ಯು ವಿವಿ ವಿದ್ಯಾರ್ಥಿ ನೇಣು ಬೀಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಗ್ರಂಥಾಲಯದ ನೆಲಮಹಡಿಯಲ್ಲಿ ಫ್ಯಾನಿಗೆ ನೇಣು ಬೀಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ರಿಶಿ ಥಾಮಸ್, ಎಂಎ ವಿದ್ಯಾರ್ಥಿಯಾಗಿದ್ದಾನೆ.

ಆತ್ಮಹತ್ಯೆಗೂ ಮೊದ್ಲು ರಿಶಿ ತನ್ನ ಪ್ರೋಫೆಸರ್ ಗೆ ಮೇಲ್ ಮಾಡಿದ್ದಾನೆ. ತನಗೆ ಬೆಳಗ್ಗೆ 11.30ರ ಸುಮಾರಿಗೆ ಮೇಲ್ ಮಾಡಿದ್ದ ಅಂತಾ ಪೋಲಿಸರಿಗೆ ಪ್ರಾಧ್ಯಾಪಕರು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆದಿದ್ದು, ಆತನ ಸ್ನೇಹಿತರು ಹಾಗೂ ಇದೇ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ಆತನ ಸಂಬಂಧಿಯನ್ನು ಸಹ ವಿಚಾರಿಸಲಾಗುತ್ತಿದೆ. ಕೆಲ ಮೂಲಗಳ ಪ್ರಕಾರ ರಿಶಿ ಥಾಮಸ್ ಖಿನ್ನತೆಗೆ ಒಳಗಾಗಿದ್ದ ಅಂತಾ ಹೇಳಲಾಗುತ್ತಿದೆ.


TAG


Leave a Reply

Your email address will not be published. Required fields are marked *

error: Content is protected !!