ಕನ್ನಡ ಕಡ್ಡಾಯ ಮಾಡಲು ಕಾನೂನು ರಚನೆ: ಸಿಎಂ ಬೊಮ್ಮಾಯಿ

175

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಭಾರತ ಒಂದು ಒಕ್ಕೂಟ ರಾಷ್ಟ್ರ. ವಿವಿಧ ಭಾಷೆ, ವಿವಿಧ ಸಂಸ್ಕೃತಿಯ ರಾಜ್ಯಗಳಿರುವ ಒಕ್ಕೂಟ. ಯಾವುದೇ ಒಂದು ಭಾಷೆಯನ್ನು ಹೇರುವುದಕ್ಕೆ ಇಲ್ಲಿ ಅವಕಾಶವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸದನದಲ್ಲಿ ಹೇಳಿದರು.

ಕನ್ನಡವನ್ನು ಸಂಪೂರ್ಣವಾಗಿ ರಕ್ಷಣೆ ಮಾಡುವುದಷ್ಟೇ ಅಲ್ಲ, ಅದನ್ನು ಬೆಳಸುವುದಕ್ಕೆ ನಮ್ಮ ಸರ್ಕಾರ, ರಾಜ್ಯ, ಜನರು ಬದ್ಧರಾಗಿದ್ದಾರೆ. ನಮ್ಮ ನಲ, ಜಲ, ಭಾಷೆ ವಿಚಾರದಲ್ಲಿ ನಮ್ಮ ರಾಜಕೀಯ ಮೀರಿ ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ. ಕನ್ನಡ ಬಳಕೆ ಹೆಚ್ಚು ಮಾಡುವುದಕ್ಕೆ ಇವತ್ತು ಕಾನೂನನ್ನೇ ತರುತ್ತಿದ್ದೇವೆ ಎಂದರು. ಇದೆ ಅಧಿವೇಶನದಲ್ಲಿ ಕನ್ನಡವನ್ನು ಕಡ್ಡಾಯ ಮಾಡಲು ಕಾನೂನಾತ್ಮಕ ಸ್ಪರೂಪ ತರುತ್ತಿದ್ದೇವೆ. ಅದು ಕನ್ನಡ ಭಾಷೆ ಹಾಗೂ ಜನರ ರಕ್ಷಣೆಗೆ ಇರುತ್ತವೆ. ಇಲ್ಲಿರುವ ಅನ್ಯಭಾಷಿಕರು ಸಹ ಕನ್ನಡ ಕಲಿಸಲು ಕೆಲಸ ಮಾಡುತ್ತವೆ. ಹೊಸ ಶಿಕ್ಷಣ ನೀತಿಯಲ್ಲಿ ಇಂಜಿನಿಯರಿಂಗ್ ಕೋರ್ಸ್ ನಲ್ಲಿ ಕನ್ನಡದ ಮೂಲಕ ಕಲಿಕೆ ತಂದಿದ್ದು, ಈಗಾಗ್ಲೇ ಒಂದು ಸೆಮಿಸ್ಟರ್ ಮುಗಿದಿದೆ ಎಂದರು.

ಸೆಪ್ಟೆಂಬರ್ 14 ಹಿಂದಿ ದವಸ ಎಂದು ಆಚರಿಸಲಾಗುತ್ತಿದೆ. ಇದನ್ನು ಪ್ರತಿ ಬಾರಿಯೂ ವಿರೋಧಿಸಿಕೊಂಡು ಬರಲಾಗುತ್ತಿದೆ. ಅದೇ ರೀತಿ ಇಂದು ಸಹ ವಿಪಕ್ಷಗಳು ವಿರೋಧಿಸಿ ಪ್ರತಿಭಟನೆ ಸಹ ನಡೆಸಿದ್ದು, ಈ ಹೊತ್ತಿನಲ್ಲಿ ಸಿಎಂ ಅಧಿವೇಶನದಲ್ಲಿ ಹೇಳಿದ ಮಾತುಗಳು ಒಂದಿಷ್ಟು ಸಮಾಧಾನ ತಂದಿದೆ ಎನ್ನಬಹುದಾಗಿದೆ.




Leave a Reply

Your email address will not be published. Required fields are marked *

error: Content is protected !!