ಮನ್ಸೂನ್ ರಾಗ ಟ್ರೇಲರ್ ರಿಲೀಸ್

157

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಡಾಲಿ ಧನಂಜಯ್ ಹಾಗೂ ರಚಿತಾ ರಾಮ್ ನಟನೆಯ ಮನ್ಸೂನ್ ರಾಗ ಚಿತ್ರದ ಟ್ರೇಲರ್ ಇಂದು ರಿಲೀಸ್ ಮಾಡಲಾಗಿದೆ. ಕೇವಲ 57 ಸೆಕೆಂಡಿನ ಟ್ರೇಲರ್ ಸಾಕಷ್ಟು ಕುತೂಹಲ ಮೂಡಿಸಿದೆ. ಇದೆ 16ರಂದು ಚಿತ್ರ ರಿಲೀಸ್ ಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಒಂದು ನವಿರಾದ ಪ್ರೀತಿಯ ಕಥೆಯನ್ನು ಎಸ್.ರವಿಂದ್ರನಾಥ್ ಹೇಳುತ್ತಿದ್ದಾರೆ. ನಟಿ ರಚಿತಾ ರಾಮ್ ಇದೆ ಮೊದಲ ಬಾರಿಗೆ ವೇಶ್ಯಾ ಪಾತ್ರದಲ್ಲಿ ನಟಿಸಿದ್ದಾಳೆ. ಪ್ರೀತಿ, ಪ್ರೇಮದ ಜೊತೆಗೆ ಆ್ಯಕ್ಷನ್ ಸಹ ಒಳಗೊಂಡಿದೆ. ಎ.ಆರ್ ವಿಖ್ಯಾತ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಅನೂಪ್ ಸೀಳಿನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಹಿರಿಯ ನಟಿ ಸುಹಾಸಿನಿ, ನಟ ಅಚ್ಯುತ್ ಕುಮಾರ್ ಸೇರಿದಂತೆ ಬಹುದೊಡ್ಡ ತಾರಾ ಬಳಗವಿದೆ.




Leave a Reply

Your email address will not be published. Required fields are marked *

error: Content is protected !!