ಖ್ಯಾತ ನಿರ್ದೇಶಕ ಭಗವಾನ್ ನಿಧನ

246

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಿರ್ದೇಶಕ, ನಿರ್ಮಾಪಕ ಎಸ್.ಕೆ ಭಗವಾನ್(90) ನಿಧನರಾಗಿದ್ದಾರೆ. ಸೋಮವಾರ ಬೆಳಗ್ಗೆ ನಗರದ ಜಯದೇವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮತ್ತೋರ್ವ ಹಿರಿಯ ನಿರ್ದೇಶಕ ದೂರೈರಾಜ್ ಅವರ ಜೊತೆಗಿನ ಇವರ ಒಡನಾಟದಿಂದಾಗಿ ಇವರನ್ನು ದೊರೈಭಗವಾನ್ ಎಂದೇ ಕರೆಯುತ್ತಿದ್ದರು.

ಈ ಜೋಡಿ ಕೂಡಿಕೊಂಡು ಬರೋಬ್ಬರಿ 55 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇದರಲ್ಲಿ 24 ಕಾದಂಬರಿ ಆಧರಿತ ಚಿತ್ರಗಳಿವೆ. ಆದರ್ಶ ಸಿನಿಮಾ ಇನ್ಸ್ಟಿಟ್ಯೂಟ್ ಮೂಲಕ ನಟನೆ ಸೇರಿ ಕಲಾರಂಗದ ವಿವಿಧ ತರಬೇತಿ ನೀಡುತ್ತಿದ್ದರು. 1956ರಲ್ಲಿ ಕಣಗಲ್ ಪ್ರಭಾಕರ್ ಶಾಸ್ತ್ರಿಗಳಿಗೆ ಸಹಾಯಕರಾಗಿ ಚಿತ್ರರಂಗದ ಬದುಕು ಶುರು ಮಾಡಿದರು.

ದೊರೈಭಗವಾನ್ ಜೋಡಿ ವರನಡ ಡಾ.ರಾಜಕುಮಾರ್ ಅವರಿಗೆ ಬರೋಬ್ಬರಿ 30 ಚಿತ್ರಗಳನ್ನು ನಿರ್ದೇಶನ ಮಾಡಿದೆ ಹೆಗ್ಗಳಿಕೆ ಹಾಗೂ ದಾಖಲೆ ಇದೆ. ಅನಂತ್ ನಾಗ್, ಜ್ಯೂಲಿ ಲಕ್ಷ್ಮಿ ಜೋಡಿಯ ಚಿತ್ರಗಳನ್ನು ಸಿನಿ ಪ್ರಿಯರು ಎಂದು ಮರೆಯದಂತೆ ಮಾಡಿದವರು. 1992ರಲ್ಲಿ ಮಾಂಗಲ್ಯ ಬಂಧನ ಈ ಜೋಡಿಯ ಕೊನೆಯ ನಿರ್ದೇಶನದ ಚಿತ್ರ. ದೊರೈರಾಜ್ ನಿಧನದ ಬಳಿಕ ಭಗವಾನ್ ಅವರ ನಿರ್ದೇಶನದಿಂದ ದೂರ ಉಳಿದರು.

ಸುದೀರ್ಘ 65 ವರ್ಷಗಳ ಸಿನಿ ಬದುಕು ಹೊಂದಿರುವ ಇವರಿಗೆ ದಾದಾ ಸಾಹೇಬ್ ಪಾಲ್ಕೆ ಅಕಾಡೆಮಿ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ರಾಜಕುಮಾರ್ ಸೌಹಾರ್ದ ಪ್ರಶಸ್ತಿ ಸೇರಿ ಹತ್ತು ಹಲವು ಪ್ರಶಸ್ತಿಗಳು ಇವರ ಮುಡಿಗೇರಿವೆ. ರಾಜ್ ಕುಮಾರ್ ಅವರ ಕುಟುಂಬದೊಂದು ಅತ್ಯಂತ ಆಪ್ತ ಒಡನಾಟ ಹೊಂದಿದ್ದರು. ಇವರ ನಿಧನಕ್ಕೆ ಕನ್ನಡ ಚಿತ್ರರಂಗ ಹಾಗೂ ಅವರ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!