ಕನ್ನಡ ಬಾವುಟಕ್ಕೆ ಬೆಂಕಿ: ಎಲ್ಲಿ ಹೋದವು ಕನ್ನಡಪರ ಸಂಘಟನೆಗಳು?

234

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮಹಾರಾಷ್ಟ್ರದಲ್ಲಿ ಕನ್ನಡದ ಧ್ವಜಕ್ಕೆ ಬೆಂಕಿ ಹಚ್ವಲಾಗಿದೆ. ಇದಕ್ಕೆ ಜನಸಾಮಾನ್ಯರು ಸೇರಿದಂತೆ ಚಿತ್ರರಂಗದ ಗಣ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಕನ್ನಡಪರ ಸಂಘಟನೆಗಳ ಮೌನದ ಕುರಿತು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಇಂತಹದೊಂದು ಹೇಯ ಕೃತ್ಯ ನಡೆದಿದೆ. ಪದೆಪದೆ ಕನ್ನಡಿಗರ ಸ್ವಾಭಿಮಾನ ಕೆಣಕುವ ಕೆಲಸವನ್ನು ಎಂಇಸಿನವರು ಹಾಗೂ ಮಹಾರಾಷ್ಟ್ರದ ಕೆಲ ಪುಂಡರು ಮಾಡುತ್ತಿದ್ದಾರೆ. ಪರ ವಿರೋಧಗಳು ಏನೇ ಇರಲಿ ಒಂದು ರಾಜ್ಯದ ಧ್ವಜ ಸುಡುವುದೆಂದರೆ ಏನು ಅರ್ಥ? ಇದು ಎಷ್ಟೊಂದು ನೀಚತನ ಹಾಗೂ ಕಾನೂನಿಗೆ ವಿರುದ್ಧವಾದದ್ದು ಅನ್ನೋದನ್ನು ಅರಿಯಬೇಕಿದೆ. ಹೀಗಿದ್ದರೂ ಕನ್ನಡಪರ ಸಂಘಟನೆಗಳ ಅಧ್ಯಕ್ಷರು, ಮುಖಂಡರು ಪತ್ರಿಕ್ರಿಯೆ ನೀಡದೆ ಇರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!