ಬಿಎಸ್ವೈ ಸಂಪುಟದಲ್ಲಿ ಮೇಲ್ವರ್ಗದವರದ್ದೇ ಮೇಲುಗೈ.. ವಿಜಯಪುರ, ಕಲ್ಯಾಣ ಕರ್ನಾಟಕಕ್ಕಿಲ್ಲ ಕಿಮ್ಮತ್ತು

433

ಪ್ರಜಾಸ್ತ್ರ ವಿಶೇಷ

ರಾಜ್ಯ ಸರ್ಕಾರಕ್ಕೆ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸೇರಿ 7 ಜನ ನೂತನವಾಗಿ ಸಚಿವರಾಗುತ್ತಿದ್ದಾರೆ. ಈ ಮೂಲಕ ಜನ 33 ಜನ ಸಚಿವ ಸಂಪುಟ ಇದಾಗಲಿದೆ. ಈ 33 ಜನ ಸಚಿವರಲ್ಲಿ ಪ್ರಾದೇಶಿಕ ಹಾಗೂ ಜಾತಿವಾರು ಲಿಸ್ಟ್ ನೋಡಿದ್ರೆ ಮೇಲ್ವರ್ಗದವರ ಮೇಲುಗೈ ಇದೆ. ಅಲ್ದೇ, ಒಬ್ಬೊಬ್ಬರ ಬಳಿ ಎರಡ್ಮೂರು ಖಾತೆಗಳಿವೆ.

ಲಿಂಗಾಯತ ಸಮುದಾಯದ 13 ಜನ ಸಚಿವರು, 11 ಒಕ್ಕಲಿಗ ಸಮುದಾಯದವರು, 4 ಜನ ಕುರುಬರು, 1 ಮಹಿಳೆ ಇದ್ದು, ಉಳಿದಂತೆ ಹಿಂದುಳಿದವರು, ಎಸ್ಸಿ, ಎಸ್ಟಿ, ಸಚಿವರ ಸಂಖ್ಯೆ 2 ದಾಟಿಲ್ಲ. ಮುಸ್ಲಿಂ, ಕ್ರೈಸ್ತ್ ಸಮುದಾಯದ ಶಾಸಕರೇ ಇಲ್ಲ ಬಿಡಿ. ಈ ವಿಚಾರ ಬಿಜೆಪಿ ವಿಷಯದಲ್ಲಿ ಹೊಸದೇನೂ ಅಲ್ಲ.

ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ಇರಲ್ಲ. ವೋಟ್ ಮಾತ್ರ ನಮ್ಗೆ ಬರಬೇಕು ಅಂತಾರೆ. ಇದ್ಹೆಂಗ್ ಅಂದ್ರೆ ಆಟಕ್ಕುಂಟು ಲಕ್ಕೆಕ್ಕಿಲ್ಲ ಎನ್ನುವ ರೀತಿ. ಈ ಕಾರಣಕ್ಕೆ ಜಾತಿವಾರು ಅಸಮತೋಲನದಿಂದ ಕೂಡಿದ ಸಚಿವ ಸಂಪುಟ ಎನ್ನಲಾಗ್ತಿದೆ.

ಇನ್ನು ಪ್ರಾದೇಶಿಕವಾರು ನೋಡಿದ್ರೆ ಬೆಂಗಳೂರಿನಲ್ಲಿಯೇ 7 ಜನ ಸಚಿವರು, ಬೆಳಗಾವಿಯಲ್ಲಿ 5 ಜನ(ರಮೇಶ ಕತ್ತಿಗೆ ಸಚಿವ ಸ್ಥಾನ ಸಕ್ಕಿದೆ) ಮಂತ್ರಿಗಳು ಇದ್ದಾರೆ. ಶಿವಮೊಗ್ಗ, ಹಾವೇರಿ, ಬಾಗಲಕೋಟೆಯಲ್ಲಿ(ನಿರಾಣಿ ಸಚಿವ ಸ್ಥಾನ ಪಕ್ಕಾ ಆಗಿದೆ) ಇಬ್ಬರು ಸಚಿವರಿದ್ದಾರೆ. ಆದ್ರೆ, ವಿಜಯಪುರ ಸೇರಿದಂತೆ ಕಲ್ಯಾಣ ಕರ್ನಾಟಕದ ಕಲಬುರಗಿ, ಕೊಪ್ಪಳ, ರಾಯಚೂರ, ಯಾದಗಿರಿ ಭಾಗದಿಂದ ಒಬ್ಬೇ ಒಬ್ಬರಿಗೆ ಸಚಿವ ಸ್ಥಾನ ನೀಡಿಲ್ಲ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ್ರೆ ಅದು ಅತಿ ಹೆಚ್ಚು ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ವಿಜಯಪುರ ಭಾಗದ ಶಾಸಕರಿಂದಲೆ. ಆದ್ರೆ, ಸಚಿವ ಸಂಪುಟ ರಚನೆಯಾದ್ರೆ ಈ ಭಾಗದ ಶಾಸಕರಿಗೆ ಮಂತ್ರಿ ಭಾಗ್ಯ ಮಾತ್ರ ಇರುವುದಿಲ್ಲ. ಹೀಗಾಗಿ ಈ ಭಾಗದ ಜಿಲ್ಲೆಗಳು ಇಂದಿಗೂ ಅಭಿವೃದ್ಧಿಯಾಗುತ್ತಿಲ್ಲವೆಂದು ಜನರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!