ಕರುನಾಡಿಗೆ ‘ವಿಜಯ’ ಕೊಟ್ಟ ಅಭಿಮನ್ಯು

348

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಮ್ ನಲ್ಲಿ ನಡೆದ ವಿಜಯ ಹಜಾರೆ ಟ್ರೋಫಿಯ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಕರ್ನಾಟಕ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ನಾಲ್ಕನೇ ಬಾರಿಗೆ ಹಜಾರೆ ಕಿರೀಟವನ್ನ ಕರ್ನಾಟಕ ಮುಡಿಗೇರಿಸಿಕೊಂಡಿದೆ.

ತಮಿಳುನಾಡು ನೀಡಿದ್ದ 253 ರನ್ ಗಳ ಗುರಿ ಬೆನ್ನು ಹತ್ತಿದ್ದ ಕರ್ನಾಟಕ ಪಡೆ, 23 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತ್ತು. ಆಗ ವರುಣನ ಆಟ ಶುರುವಾಯ್ತು. ಇವರ ಆಟ ನಿಂತಿತು. ಮ್ಯಾಚ್ ಮತ್ತೆ ಆಡಿಸುವುದು ಕಷ್ಟವೆಂದು ತಿಳಿದ ಬಳಿಕ, ಸ್ಥಳೀಯ ಮಟ್ಟದ ವಿಜಯದೇವನ ನಿಯಮದಂತೆ ಕರ್ನಾಟಕಕ್ಕೆ ಗೆಲುವು ಘೋಷಿಸಲಾಯ್ತು. ಈ ನಿಯಮದ ಪ್ರಕಾರ ಕರ್ನಾಟಕ 23 ಓವರ್ ಗಳಲ್ಲಿ 86 ರನ್ ಗಳಿಸಬೇಕಿತ್ತು. ಆದ್ರೆ, ಈಗಾಗ್ಲೇ 146 ರನ್ ಗಳಿಸಿದ್ರಿಂದ ಕ್ಯಾಪ್ಟನ್ ಮನೀಶ ಪಾಂಡೆ ಟೀಂಗೆ 60 ರನ್ ಗಳ ಜಯ ಒಲಿಯಿತು.

5 ವಿಕೆಟ್ ಪಡೆದ ಅಭಿಮನ್ಯು ಮಿಥನ

ಕರ್ನಾಟಕ ಪರ ಮಯಾಂಕ ಅಗರ್ವಾಲ್ 69, ಕೆ.ಎಲ್ ರಾಹುಲ 52 ರನ್ ಗಳಿಸುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಇನ್ನು ಬೌಲಿಂಗ್ ನಲ್ಲಿ ಮಿಂಚಿದ ಅಭಿಮನ್ಯು ಮಿಥುನ ಹ್ಯಾಟ್ರಿಕ್ ವಿಕೆಟ್ ಸಮೇತ 5 ವಿಕೆಟ್ ಪಡೆದು ಮಿಂಚಿದ. ಈ ಮೂಲಕ ತನ್ನ 30ನೇ ವರ್ಷದ ಹುಟ್ಟು ಹಬ್ಬವನ್ನ ಭರ್ಜರಿಯಾಗಿ ಆಚರಿಸಿದ. ಮಿಥುನಗೆ ಎಲ್ಲ ಕಡೆಯಿಂದ ಶುಭಶಾಯಗಳ ಸುರಿಮಳೆ ನಡೆದಿದೆ.

ಮಯಾಂಕ ಅಗರ್ವಾಲ್ ಬ್ಯಾಟಿಂಗ್ ಸ್ಟೈಲ್



Leave a Reply

Your email address will not be published. Required fields are marked *

error: Content is protected !!