ಭೀಮೆಯ ಕಂದನ ಕನಸುಗಳು ಕೃತಿ ಲೋಕಾರ್ಪಣೆ

321

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಸಿಂದಗಿ: ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಹಾಗೂ ಜ್ಞಾನ ಭಾರತಿ ವಿದ್ಯಾಮಂದಿರ ಸಹಯೋಗದಲ್ಲಿ ಶನಿವಾರ ಆಯೋಜನೆ ಮಾಡಿದ ಕಾರ್ಯಕ್ರಮದಲ್ಲಿ ಶಶಿಕಲಾ ತಳವಾರ ಅವರ ‘ಭೀಮೆಯ ಕಂದನ ಕನಸುಗಳು’ ಅನ್ನೋ ಕವನ ಸಂಕಲನ ಬಿಡುಗಡೆಗೊಂಡಿತು. ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ ಕೃತಿ ಬಿಡುಗಡೆ ಮಾಡಿದರು.

ಕೃತಿ ಬಿಡುಗಡೆ ಮಾಡಿ ಮಾತ್ನಾಡಿದ ಅವರು, ಇವತ್ತಿನ ಮಕ್ಕಳು ಮೊಬೈಲ್ ಹೆಚ್ಚಾಗಿ ಬಳಕೆ ಮಾಡ್ತಿದ್ದಾರೆ. ಅದರಲ್ಲಿ ಸಿಗುವ ಜ್ಞಾನಕ್ಕಿಂತ ಹೆಚ್ಚು ಪುಸ್ತಕದಿಂದ ಸಿಗುತ್ತೆ. ಹೀಗಾಗಿ ಹೆಚ್ಚೆಚ್ಚು ಪುಸ್ತಕಗಳನ್ನು ಓದಬೇಕು ಅನ್ನೋ ಕಿವಿ ಮಾತು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಮಕ್ಕಳ ಸಾಹಿತಿ ಹ.ಮ ಪೂಜಾರಿ, ಪಠ್ಯ ಪುಸ್ತಕಗಳು ಸಹ ಸಾಹಿತ್ಯದ ಕೃತಿಗಳೆ. ಅದರಲ್ಲಿಯೂ ಕಥೆ, ಕವಿತೆ, ನಾಟಕ ಸೇರಿ ಎಲ್ಲವೂ ಇರುತ್ತೆ ಎಂದರು. ಸಾಹಿತ್ಯದಿಂದ ಒಳ್ಳೆಯ ಸಂಸ್ಕಾರ ಸಿಗುತ್ತೆ. ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಂಡು ಮಾನವರಾಗಬಹುದು. ಅತ್ಯುನ್ನತ ಜ್ಞಾನ ಸಂಪಾದಿಸಿದರೆ ದೇವಮಾನವರಾಗಬಹುದು. ಇಲ್ಲದೆ ಹೋದರೆ ದಾನವರಾಗುತ್ತೇವೆ ಅಂತಾ ಹೇಳಿದರು.

ಉಪನ್ಯಾಸಕ ಮಂಜುನಾಥ ಜುನಗೊಂಡ ಕೃತಿ ಪರಿಚಯ ಮಾಡಿದರು. ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಂಭುನಾಥ ಕಂಚ್ಯಾಣಿ ಅಧ್ಯಕ್ಷೀಯ ಮಾತುಗಳನ್ನಾಡಿದರು. ತಾಲೂಕು ಅಧ್ಯಕ್ಷ ಅಶೋಕ ಬಿರಾದಾರ ಪ್ರಾಸ್ತಾವಿಕವಾಗಿ ಮಾತ್ನಾಡಿದರು. ಅತಿಥಿಗಳಾಗಿ ಜ್ಞಾನ ಭಾರತಿ ಶಾಲೆಯ ಮುಖ್ಯ ಗುರುಗಳಾದ ಜಗದೀಶ ಪಾಟೀಲ, ಕಾರ್ಯದರ್ಶಿ ಸತೀಶ ಹಿರೇಮಠ, ಪಿಎಸ್ಐ ನಭಿ ಭಾಗವಹಿಸಿದ್ದರು. ಶಿಕ್ಷಕ ಜಿ.ಆರ್ ಕುಂಬಾರ ಸ್ವಾಗತಿಸಿದರು. ಡಾ.ಪ್ರಕಾಶ ಪ್ರರ್ಥನಾ ಗೀತೆ ಹಾಡಿದರು.




Leave a Reply

Your email address will not be published. Required fields are marked *

error: Content is protected !!