400 ಕೋಟಿಯಲ್ಲಿ ಮುಗಿಯುವ ಕಾಮಗಾರಿಗೆ 1 ಸಾವಿರ ಕೋಟಿ: ಕೋಡಿಹಳ್ಳಿ

456

ಪ್ರಜಾಸ್ತ್ರ ಸುದ್ದಿ

ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನಲ್ಲಿರುವ ಕೆಬಿಜೆಎನ್ಎಲ್ ಕಾಲುವೆಯ ನಾರಾಯಣಪುರ ಬಲದಂಡೆಯ 95 ಕಿಲೋ ಮೀಟರ್ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಆಕ್ರೋಶ ಹೊರ ಹಾಕಿದ್ದಾರೆ.

ಕೃಷ್ಣ ಭಾಗ್ಯ ಜಲ ನಿಗಮದ ವತಿಯಿಂದ ನಡೆಯುತ್ತಿರುವ ಕಾಮಗಾರಿಗಾಗಿ 995 ಕೋಟಿ ರೂಪಾಯಿಯನ್ನ ಸರ್ಕಾರ ಬಿಡುಗಡೆ ಮಾಡಿದೆ. ಡಿ.ವೈ ಉಪ್ಪಾರ ಅನ್ನೋ ಗುತ್ತಿಗೆದಾರ ಕಾಮಗಾರಿ ಕೆಲಸ ಮಾಡ್ತಿದ್ದು, 400 ಕೋಟಿ ರೂಪಾಯಿಯಲ್ಲಿ ಮುಗಿಯುವ ಕಾಮಗಾರಿಗೆ 1 ಸಾವಿರ ಕೋಟಿ ರೂಪಾಯಿಗಳಲ್ಲಿ ಮಾಡುತ್ತಿದ್ದಾರೆ. ಇದು ಅಧಿಕಾರಿಗಳ ಹಗಲು ದರೋಡೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಗಂಭೀರವಾಗಿ ಆರೋಪಿಸಿದ್ದಾರೆ.

ಈಗಾಗಲೇ ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಡಿ.ವಾಯ್.ಉಪ್ಪಾರ ಏನು ಬಿಜೆಪಿ ವಾರಿಯರ್ಸಾ ಅಥವಾ ನಿಮ್ಮ ಸೇವೆ ಮಾಡಲು ಇದ್ದಾರಾ? ಮುಖ್ಯಮಂತ್ರಿಗಳೇ ತಕ್ಷಣ ಕಾಲುವೆ ಕಾಮಗಾರಿ ವೀಕ್ಷಣೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ. ಸರ್ಕಾರ ನಿರ್ಲಕ್ಷ್ಯ ವಹಿಸಿದರೆ ರೈತರು ಪ್ರತಿಭಟನೆ ಮಾಡಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!